ಮನೆ ಮುಂದೆ ಕುಳಿತಿದ್ದ ವ್ಯಕ್ತಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡದು ಸಾವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದವನಿಗೆ ಯಮ ಸ್ವರೂಪಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಆತನ ಮೃತಪಟ್ಟಿದ್ದಾನೆ.

READ | ಗಾಂಜಾ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬೇಧಿಸಿದ ಖಾಕಿ, ಕೆಜಿಗಟ್ಟಲೇ ಸಿಕ್ತು ಮಾದಕ ವಸ್ತು

ಸೂಡೂರು ಗ್ರಾಮದ ವಾಸುದೇವ್ (52) ಎಂಬಾತ ಮೃತಪಟ್ಟಿದ್ದು, ನಾಗೇಂದ್ರ ಎಂಬುವವರ ಮನೆಯ ಮುಂದೆ ಕುಳಿತು ಮಾತನಾಡುವಾಗ ಘಟನೆ ನಡೆದಿದೆ.
ದೇವರಾಜ್ ಎಂಬಾತ ಅತೀ ವೇಗದಿಂದ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಬಂದಿದ್ದು, ವಾಸುದೇವ್ ಅವರಿಗೆ ಡಿಕ್ಕಿ ಹೊಡೆದಿದೆ.
ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ಫಲ ನೀಡದೇ ಆತ ಮೃತಪಟ್ಟಿದ್ದಾನೆ.

READ | ಸೋಮವಾರದಿಂದ ಲಾಕ್‍ಡೌನ್ ಇನ್ನಷ್ಟು ಸಡಿಲಿಕೆ, ಮಾಲ್, ದೇವಸ್ಥಾನ ತೆರೆಯಲು ಅವಕಾಶ, ನೈಟ್ ಕರ್ಫ್ಯೂ ಇರಲ್ಲ, ಏನೇನು ನಿಯಮ ಅನ್ವಯ, ಇಲ್ಲಿದೆ ಮಾಹಿತಿ

ಮೃತನ ಮಗ ಕಾರ್ತಿಕ್ ದೂರು ನೀಡಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 304(ಎ) ಅಡಿ ಪ್ರಕರಣ ದಾಖಲಾಗಿದೆ.

error: Content is protected !!