1,000 ತಲುಪಿದ ಕೊರೊನಾ ಸಾವಿನ ಸಂಖ್ಯೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೊದಲನೇ ಮತ್ತು ಎರಡನೇ ಅಲೆ ಸೇರಿ ಇದುವರೆಗೆ ಒಟ್ಟು 1,000 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.

https://www.suddikanaja.com/2021/06/17/corona-positivity-decline/

ಮಂಗಳವಾರ ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಪಾಸಿಟಿವ್ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾದರೂ ಸಾವಿನ ಆರ್ಭಟ ಮಾತ್ರ ಮುಂದುವರಿದಿದೆ.
ಸಕ್ರಿಯ ಪ್ರಕರಣದಲ್ಲೂ ಇಳಿಕೆ | ಜಿಲ್ಲೆಯಲ್ಲಿ ಪ್ರಸ್ತುತ 856 ಸಕ್ರಿಯ ಪ್ರಕರಣಗಳಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 132 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್‍ಸಿ 76, ಕೋವಿಡ್ ಕೇರ್ ಸೆಂಟರ್ ನಲ್ಲಿ 158, ಖಾಸಗಿ ಆಸ್ಪತ್ರೆಯಲ್ಲಿ 122, ಹೋಮ್ ಐಸೋಲೇಷನ್ ನಲ್ಲಿ 322 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 46 ಸೋಂಕಿತರಿದ್ದಾರೆ.

ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,426 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 2,961 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.

ತಾಲೂಕುಗಳಲ್ಲೂ ಪ್ರಕರಣಗಳು ಇಳಿಕೆ | ಶಿವಮೊಗ್ಗ 36,ಭದ್ರಾವತಿ 24, ತೀರ್ಥಹಳ್ಳಿ 7, ಶಿಕಾರಿಪುರ 3, ಸಾಗರ 15, ಹೊಸನಗರ 4, ಸೊರಬ 1, ಬಾಹ್ಯ ಜಿಲ್ಲೆಯ 7ಸೋಂಕಿತರಿದ್ದಾರೆ.

https://www.suddikanaja.com/2021/06/28/covid-cases-decline-in-shivamogga-3/

error: Content is protected !!