ಭದ್ರಾ ಡ್ಯಾಂ ತುಂಬದ ಹೊರತು ವಾಣಿ ವಿಲಾಸಕ್ಕೆ ನೀರು ಬಿಟ್ಟರೆ ಹೋರಾಟದ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾ ಜಲಾಶಯ ತುಂಬದ ಹೊರತು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಬಾರದು. ಒಂದು‌ ವೇಳೆ, ನೀರಾವರಿ ಸಲಹಾ ಸಮಿತಿ ಸಭೆ ಸೇರದೇ ನೀರು ಹರಿಸಲು ಮುಂದಾದರೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಒಕ್ಕೂಟ ಎಚ್ಚರಿಸಿದೆ.

READ | ನಿಮಗೆ ಕೈ ಮುಗಿದು ಪ್ರಾರ್ಥಿಸುವೆ ನನಗೆ ಆ ವಿಚಾರ ಮಾತ್ರ ಕೇಳ್ಬೇಡಿ

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಹರಿಸುತ್ತಿರುವ ನೀರು ತಕ್ಷಣ ನಿಲ್ಲಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ಈ ವೇಳೆ ಮಾತನಾಡಿದ ರೈತರ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಜುಲೈ 9ರಂದು ಕೇವಲ 155.9 ಅಡಿ ನೀರು ಲಭ್ಯವಿದೆ. ಮಳೆ ಕೊರತೆಯಾದರೆ ಇನ್ನಷ್ಟು ಕಷ್ಟ ಎದುರಾಗುವ ಸಾಧ್ಯತೆ ಇದೆ. ಡೆಡ್ ಸ್ಟೋರೇಜ್, ಬೇಸಿಗೆಗೆ ಕುಡಿಯುವ ನೀರು ಇವೆಲ್ಲವೂ ಸೇರಿ ಕೇವಲ 28 ದಿನಗಳಿಗೆ‌ ಆಗುವಷ್ಟು ಮಾತ್ರ ಇದೆ ಎಂದು ತಿಳಿಸಿದರು.

READ | ಶಿವಮೊಗ್ಗದಲ್ಲಿ ಕೊರೊನಾ ರಿಲೀಫ್, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

ಪ್ರಮುಖರಾದ ಆರ್.ಅತ್ತಿಗುಂದ, ಶ್ರೀನಿವಾಸ್, ಕೆ. ದೇವೇಂದ್ರಪ್ಪ, ಜಿ.ಎಂ. ಚನ್ನಬಸಪ್ಪ, ಎಸ್. ಶಿವಮೂರ್ತಿ, ಕೆ. ರಾಘವೇಂದ್ರ, ಎಚ್.ಎಂ. ಚಂದ್ರಪ್ಪ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

error: Content is protected !!