ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ!

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ರಸ್ತೆಗಳನ್ನು ಅಗೆದು ಬಿಡಲಾಗಿದೆ. ರಸ್ತೆಯ ಮಧ್ಯೆ ಪೈಪ್ ಲೈನ್ ಗಾಗಿ ಅಗೆದು ಮಣ್ಣು ಮುಚ್ಚಲಾಗಿದೆ. ಇದರಿಂದಾಗಿ, ಗುಂಡಿಗಳು ನಿರ್ಮಾಣವಾಗಿವೆ.

ROAD 2
ತಿಲಕ್ ನಗರ, ಗಾಂಧಿ‌ನಗರ, ಜೈಲು ರಸ್ತೆ, ರವೀಂದ್ರನಗರ, ಗೋಪಾಳ, ಚೆನ್ನಪ್ಪ ಲೇಔಟ್, ಎಎನ್.ಕೆ ರಸ್ತೆ, ಹೊಸಮನೆ ಹೀಗೆ ಎಲ್ಲ ಕಡೆಗಳಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ವಾಹನ ಸಂಚಾರವೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಅಪ್ಪತಪ್ಪಿ ವೇಗವಾಗಿ ವಾಹನ ಸಂಚರಿಸಿದ್ದಲ್ಲಿ ಸಂಚಕಾರ ತಪ್ಪಿದ್ದಲ್ಲ.‌

ಅತ್ಯಂತ ಅವೈಜ್ಞಾನಿಕವಾಗಿ ರಸ್ತೆಗಳಲ್ಲಿ ಗುಂಡಿ ತೋಡಿ ಮುಚ್ಚಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಚಲಿಸಬೇಕಾಗಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತಿದ್ದು ರಸ್ತೆ ಕೊಳಚೆಯಾಗಿ‌ ಮಾರ್ಪಟ್ಟಿದೆ. ವೇಗವಾಗಿ ವಾಹನ ಓಡಿಸಿದ್ದಲ್ಲಿ ಸ್ಕಿಡ್ ಆಗುವ ಸಾಧ್ಯತೆಯೂ ಇದೆ.

ಇಷ್ಟಾದರೂ ಮಹಾನಗರ ಪಾಲಿಕೆ‌ ಅಧಿಕಾರಿಗಳು ಇದರೆಡೆಗೆ ಗಮನವೇ ಹರಿಸುತ್ತಿಲ್ಲ. ಕನಿಷ್ಠ ಪಕ್ಷ ಗುಂಡಿಗಳನ್ನಾದರೂ ಸರಿಯಾಗು ಮುಚ್ಚಬೇಕಿತ್ತು. ಅದನ್ನೂ ಮಾಡಿಲ್ಲ. ಇದರೆಡೆಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು.
– ರಾಜೇಶ್, ಶಿವಮೊಗ್ಗ ನಿವಾಸಿ

https://www.suddikanaja.com/2021/01/24/shivamogga-gandhi-bazar-fire-accident-loss/

error: Content is protected !!