ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಇದರ ಅಂಗ ಸಂಸ್ಥೆಯಾದ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 19 ರೋಗಿಗಳಿಗೆ ಅನುಕೂಲವಾಗುವ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
https://www.suddikanaja.com/2021/05/02/two-case-in-vinobanagara-police-station-for-illegal-supply-of-oxygen/
ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ 19 ಸೋಂಕಿತರು ಮತ್ತು ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಅನುಕೂಲವಾಗುವ ದೃಷ್ಟಿಯಿಂದ 5 ಲೀಟರ್ ಸಾಮಥ್ರ್ಯದ ಒಟ್ಟು 25 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ನೀಡಲಾಯಿತು.
5 ಲೀಟರ್ ಸಾಮಥ್ರ್ಯದ ಒಂದು ಕಾನ್ಸನ್ ಟ್ರೇಟರ್ ಮೊತ್ತ 1.28 ಲಕ್ಷ ರೂಪಾಯಿ ಆಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 5 ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ತಲಾ 4 ರಂತೆ ಒಟ್ಟು 25 ಕಾನ್ಸನ್ ಟ್ರೇಟರ್ ಗಳನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ ಹಾಗೂ ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಅವರಿಗೆ ಸಂಸ್ಥೆಯ ಪದಾಧಿಕಾರಿಗಳು ಹಸ್ತಾಂತರಿಸಿದರು.
ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಶಿಕ್ಷಕ ಸಂಯೋಜಕ ಶಶಿಭೂಷಣ್ ಶಾಸ್ತ್ರಿ, ಶಿಕ್ಷಕರಾದ ಮೂರ್ತಿ ಭದ್ರಾವತಿ, ಭಾಗ್ಯ ಮೂರ್ತಿ, ಸಂಸ್ಥೆಯ ಜಿಲ್ಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ವೇಣುಗೋಪಾಲ್, ಪ್ರಕಾಶ್, ನಾಗರಾಜ್ ಸೇಠ್ ಉಪಸ್ಥಿತರಿದ್ದರು.
https://www.suddikanaja.com/2021/02/21/demand-for-sports-authority-of-india-sub-center-in-shivamogga/