ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕಿಂತ ಕಡಿಮೆಯಾಗಿದೆ. ಗುರುವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ 1,731 ಸೋಂಕಿತರಿದ್ದಾರೆ.
ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, ಗುಣಮುಖರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂದು 343 ಜನ ಗುಣಮುಖರಾಗಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 91, ಭದ್ರಾವತಿ 31, ತೀರ್ಥಹಳ್ಳಿ 4, ಶಿಕಾರಿಪುರ 18, ಸಾಗರ 33, ಹೊಸನಗರ 3, ಸೊರಬ 5, ಬಾಹ್ಯ ಜಿಲ್ಲೆಯ ಎಂಟು ಜನರಲ್ಲಿ ಸೋಂಕು ಪತ್ತೆಯಾಗಿದೆ.
193 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 8 ವಿದ್ಯಾರ್ಥಿಗಳು, 1 ಕಾಲೇಜು ಇದ್ದಾರೆ. ನಾಲ್ಕು ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,540 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 3,169 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ 236, ಡಿಸಿಎಚ್ಸಿನಲ್ಲಿ 109, ಕೋವಿಡ್ ಕೇರ್ ಸೆಂಟರ್ನಲ್ಲಿ 475, ಖಾಸಗಿ ಆಸ್ಪತ್ರೆಯಲ್ಲಿ 283, ಹೋಮ್ ಐಸೋಲೇಷನ್ನಲ್ಲಿ 346, ಟ್ರಿಯೇಜ್ನಲ್ಲಿ 282 ಜನರಿದ್ದಾರೆ.