ರಾತ್ರೋರಾತ್ರಿ 30 ಬೈಕ್ ಗಳಲ್ಲಿನ ಪೆಟ್ರೋಲ್ ಕಳವು!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದೇ ದಿನ ಮೂವತ್ತು ಬೈಕ್ ಗಳಲ್ಲಿನ ಪೆಟ್ರೋಲ್ ಕಳವು ಮಾಡಲಾಗಿದ್ದು, ಈ ಘಟನೆ ಜನರು ಬೆಸ್ತು ಬೀಳುವಂತೆ ಮಾಡಿದೆ.

https://www.suddikanaja.com/2020/12/01/barekal-batteri-main-gate-wrack-for-treasure/

ಪುರಲೆಯ ಒಕ್ಕಲಿಗರ ಬೀದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್ ಗಳಲ್ಲಿನ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಪೆಟ್ರೋಲ್ ಪೈಪ್ ಗಳನ್ನು ಕತ್ತರಿಸಿ ನಂತರ ಕೃತ್ಯ ಎಸಗಲಾಗಿದೆ. ಶುಕ್ರವಾರ ರಾತ್ರಿ ಮಲಗುವ ಟ್ಯಾಂಕ್ ನಲ್ಲಿದ್ದ ಪೆಟ್ರೋಲ್ ಇತ್ತು.‌ ಆದರೆ, ಬೆಳಗ್ಗೆ ಎದ್ದು ನೋಡುವ ಹೊತ್ತಿಗೆ ಒಕ್ಕಲಿಗ ಬೀದಿ ಹಾಗೂ ಅಕ್ಕ ಪಕ್ಕದ ಬೀದಿಗಳಲ್ಲಿ ಕಳ್ಳರು ಮನೆಯ ಹೊರಗಡೆ ನಿಲ್ಲಿಸಿದ್ದ ಬೈಕ್ ಗಳ ಪೆಟ್ರೋಲ್ ಕಳವು ಮಾಡಿ ಪರಾರಿಯಾಗಿದ್ದಾರೆ.

ಪೊಲೀಸರ ಗಸ್ತು ಹೆಚ್ಚಿಸಲು ಸ್ಥಳೀಯರ ಒತ್ತಾಯ | ಪುರಲೆ ಭಾಗದಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು. ಈ ಮೂಲಕ ಇಂತಹ ಕೃತ್ಯ ಮರು ಕಳುಹಿಸದಂತೆ ಭದ್ರತೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪೆಟ್ರೋಲ್ ಬೆಲೆ ಮೊದಲೇ ಗಗನಕ್ಕೇರಿದ್ದು ಇಂತಹ ಸ್ಥಿತಿಯಲ್ಲಿ ಈ ರೀತಿ ಪೆಟ್ರೋಲ್ ಕಳ್ಳತನ ಆಗಿರುವುದರಿಂದ ವಾಹನಗಳ ಮಾಲೀಕರು ದೃತಿಗೆಟ್ಟಿದ್ದಾರೆ.

error: Content is protected !!