Vistadome Coach | ರೈಲು ಪ್ರಯಾಣಿಕರಿಗೆ ಶುಭ ಸುದ್ದಿ, ಶಿವಮೊಗ್ಗ- ಬೆಂಗಳೂರು ವಿಸ್ಟಾಡೋಮ್ ಏಸಿ ಬೋಗಿ ಸಂಚಾರ ಪುನರಾರಂಭ

Vistadome

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದ್ದ ವಿಸ್ಟಾಡೋಮ್ ಬೋಗಿ(vistadome coach)ಯನ್ನು ಪುನರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ  (western railway) ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಪ್ರಕೃತಿ ಸೊಬಗನ್ನು ವೀಕ್ಷಿಸುತ್ತ ಪ್ರಯಾಣಿಸಬೇಕು ಎನ್ನುವವರಿಗೆ ಅನುಕೂಲವಾಗಲಿದೆ.
ನೈರುತ್ಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಶವಂತಪುರ- ಶಿವಮೊಗ್ಗ ಟೌನ್ (ರೈಲು ಸಂಖ್ಯೆ 16579), ಶಿವಮೊಗ್ಗ ಟೌನ್- ಯಶವಂತಪುರ (ರೈ.ಸಂಖ್ಯೆ 16580) ಇಂಟರ್‍ಸಿಟಿ ಎಕ್ಸ್’ಪ್ರೆಸ್ ರೈಲಿಗೆ ಒಂದು ಏಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.
ಯಾವಾಗಿಂದ ಪುನರಾರಂಭ?
ಡಿಸೆಂಬರ್ 30ರಿಂದ 2023ರ ಮಾರ್ಚ್ 31ರ ವರೆಗೆ ಒಂದು ಏಸಿ ವಿಸ್ಟಾಡೋಮ್ ಕೋಚ್ ಸಂಚಾರಿಸಲಿದೆ. ಈ ಹಿಂದೆಯೂ ಪ್ರಯಾಣಿಕರಿಗೆ ಪ್ರವಾಸದ ಸೊಬಗು ನೋಡಲು ಸಿಗಲಿ ಎಂಬ ಉದ್ದೇಶದಿಂದ ವಿಸ್ಟಾಡೋಮ್ ಕಲ್ಪಿಸಲಾಗಿತ್ತು.

READ | ಶಿವಮೊಗ್ಗಕ್ಕೆ ಬಂದ ವಿಸ್ಟಾಡೋಮ್ ರೈಲು, ಮೊದಲ ದಿನ ಎಷ್ಟು ಜನ ಪ್ರಯಾಣ, ಹೇಗಿತ್ತು ರೆಸ್ಪಾನ್ಸ್?

ವಿಸ್ಟಾಡೋಮ್ ಬೋಗಿ ವಿಶೇಷಗಳೇನು?

  • ಇಡೀ ಬೋಗಿಗೆ ಗಾಜಿನ ಹೊದಿಕೆ ಇರಲಿದ್ದು, ಕಿಟಕಿಯೂ ಗಾಜಿನದ್ದೇ ಆಗಿರುವುದರಿಂದ ಹೊರಗಡೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.
  • ವಿಸ್ಟಾಡೋಮ್ ಬೋಗಿಯಲ್ಲಿ ಒಟ್ಟು 44 ಆಸನಗಳಿದ್ದು, ಪ್ರತಿಯೊಂದು ಆಸನ 180 ಡಿಗ್ರಿ ತಿರುಗಿಸಬಹುದು. ಆಸನಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೊಂದಿಸಿಕೊಳ್ಳಬಹುದು.
  • ದಕ್ಷಿಣ ಭಾರತದಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ವಿಸ್ಟಾಡೋಮ್ ಬೋಗಿ ಸೌಲಭ್ಯ ಪ್ರಾಪ್ತವಾಗಿರುವುದು ಎರಡನೇಯದ್ದು. ಬೇಡಿಕೆ ಹಿನ್ನೆಲೆಯಲ್ಲಿ ಕೋಚ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

ತಾಳಗುಪ್ಪವರೆಗೆ ವಿಸ್ತರಿಸುವಂತೆ ಮನವಿ
ಶಿವಮೊಗ್ಗ ಟೌನ್ ನಿಂದ ತಾಳಗುಪ್ಪವರೆಗೆ ಪ್ರಯಾಣಿಕರು ಕಾಡಿನ ಸೌಂದರ್ಯವನ್ನು ಸವಿಯಬಹುದಾದ ಸ್ಥಳಗಳಿದ್ದು, ಕಾನನ ನಡುವೆ ರೈಲು ತೆರಳುವುದರಿಂದ ಪ್ರಯಾಣ ಖುಷಿ ನೀಡಲಿದೆ. ಹೀಗಾಗಿ, ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸುವಂತೆ ಕೋರಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಬೆಳಗ್ಗೆ ಬೇಗ ಬೆಂಗಳೂರಿನಿಂದ ಹೊರಟು ತಾಳಗುಪ್ಪವರೆಗೆ ರೈಲು ವಿಸ್ತರಿಸುವಂತೆ ಮನವಿ ಮಾಡಲಾಗಿದೆ. ಪ್ರವಾಸಿಗರು ಪ್ರಸ್ತುತ ನೀಡಿರುವ ಕೋಚ್’ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/

error: Content is protected !!