ಸುದ್ದಿ ಕಣಜ.ಕಾಂ ಸಾಗರ: ಆನಂದಪುರಂ ಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ್ದ ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ.
ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಶುಕ್ರವಾರ ಕಿಟ್ ನೀಡಿದ್ದು, ಅದರ ಪೈಕಿ ಗ್ರಾಪಂ ಪಿಡಿಒ ಅವರು 25 ಕಿಟ್ ಗಳನ್ನು ಖಾಸಗಿ ಕಾರುವೊಂದರಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ ಸೇರಬೇಕಾದ ಫುಡ್ ಕಿಟ್ ಗಳನ್ನು ಬೇರೆಡೆಗೆ ಸಾಗಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ಕಣಜ.ಕಾಂ | DISTRICT | 03 OCT 2022 ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP) ಬಿ.ಎಂ.ಲಕ್ಷ್ಮೀಪ್ರಸಾದ್ (BM Lakshmiprasad) ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. […]
ಸುದ್ದಿ ಕಣಜ.ಕಾಂ | DISTRICT | LOK ADALAT ಶಿವಮೊಗ್ಗ: ಲೋಕ ಅದಾಲತ್ ಮೂಲಕ ನೊಂದ ಕುಟುಂಬಗಳಿಗೆ ಆಸರೆ ಸಿಕ್ಕಿದೆ. ಸಂತ್ರಸ್ತ ಕುಟುಂಬಕ್ಕೆ ₹19 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ಶನಿವಾರ ನಡೆದ […]
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಯುವತಿ ಸೇರಿ ಇಬ್ಬರಿಗೆ 8.40 ಲಕ್ಷ ರೂಪಾಯಿ ಮೋಸ (fraud) ಮಾಡಲಾಗಿದೆ. ಹಣ ಡಬಲ್ (money doubling) […]