ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಬರುತ್ತವೆಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತೇನೆ ಎಂಬ ಭಯದಿಂದ ವಿದ್ಯಾರ್ಥಿನಿಯೊಬ್ಬಳು ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

READ | ಪದವಿ ಹೋದರೆ ‘ಗೂಟ’ ಹೋಯ್ತು ಎಂದುಕೊಳ್ಳುವೆ ವಿನಹ ಬೇಸರ ಪಡಲ್ಲ, ಯಡಿಯೂರಪ್ಪ, ಕಟಿಲ್ ಅಂತಹ ರಾಜಕಾರಣಿ ಅಲ್ಲ

ರಿಪ್ಪನಪೇಟೆಯ ಕೆಂಚನಾಲ ಗ್ರಾಮ ನಿವಾಸಿ ಚೇತನಾ (16) ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ಮನೆಯಲ್ಲಿದ್ದ ಥಾಯಿರೈಡ್ ಮಾತ್ರೆಗಳನ್ನು ನುಂಗಿ ಅಸ್ವಸ್ಥಳಾಗಿದ್ದಾಳೆ.
ಆಸ್ಪತ್ರೆಗೆ ದಾಖಲು, ಮೆಗ್ಗಾನ್ ಗೆ ಶಿಫ್ಟ್ | ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ರಿಪ್ಪನಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ, ಹೆಚ್ಚುವರಿ ಚಿಕಿತ್ಸೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಚಿಕಿತ್ಸೆ ಬಳಿಕ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!