ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸೋಮವಾರ ಮತ್ತೆ ಏರಿಕೆಯಾಗಿದೆ. ಭಾನುವಾರ ಇಡೀ ತಾಲೂಕಿನಲ್ಲಿ ಬರೀ ನಾಲ್ಕು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು. ಆದರೆ, ಮಾರನೇಯ ದಿನವೇ ಈ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
https://www.suddikanaja.com/2021/07/18/covid-cases-decline-in-bhadravathi/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 13, ಶಿಕಾರಿಪುರ 8, ತೀರ್ಥಹಳ್ಳಿ 13, ಸೊರಬ 0, ಹೊಸನಗರ 10, ಸಾಗರ 13, ಬಾಹ್ಯ ಜಿಲ್ಲೆಯ 2 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ 81 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 143 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,251 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 3,397 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 125 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 61, ಕೋವಿಡ್ ಕೇರ್ ಸೆಂಟರ್ ನಲ್ಲಿ 90, ಖಾಸಗಿ ಆಸ್ಪತ್ರೆಯಲ್ಲಿ 59, ಹೋಮ್ ಐಸೋಲೇಷನ್ ನಲ್ಲಿ 281 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 21 ಸೋಂಕಿತರಿದ್ದಾರೆ. 637 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
https://www.suddikanaja.com/2021/07/16/covid-death-decline-in-shivamogga/