ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿರುವ ಬಸವೇಶ್ವರ ಪುತ್ಥಳಿ ಅಡಿ ವಿಶೇಷ ಕಲ್ಲು, ಹೇಗಿರಲಿದೆ ವಿನ್ಯಾಸ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾರಿ ಚರ್ಚೆ, ವಾದ, ವಿವಾದಗಳ ಬಳಿಕ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಅದರ ಬೆನ್ನಲ್ಲೇ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

https://www.suddikanaja.com/2021/07/16/basaveshwara-statue/

ನಗರದ ಗಾಂಧಿಪಾರ್ಕ್ ಮುಂಭಾಗದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಗ್ರಿಲ್ಸ್ ಆದಿಯಾಗಿ ಎಲ್ಲ ತಯಾರಿಕೆಗಳನ್ನು ಮಾಡಲಾಗಿದೆ. ಪುತ್ಥಳಿ ಅಡಿ ವಿಶೇಷ ಕಲ್ಲು ಆಯ್ಕೆ ಮಾಡಲಾಗಿದ್ದು, ಇದಕ್ಕಾಗಿ ಮೇಯರ್ ಸುನೀತಾ ಅಣ್ಣಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಸೂತಕೋಟೆಗೆ ಭೇಟಿ ನೀಡಲಾಗಿದೆ.
ಯಾವ ಕಲ್ಲು, ಏನು ವಿಶೇಷ | ನೀರಜ್ ಪಾಟೀಲ್ ಅವರು 2018ರಲ್ಲಿ ಶಿವಮೊಗ್ಗಕ್ಕೆ ನೀಡಿದ ಬಸವೇಶ್‍ವರ ಪುತ್ಥಳಿಯನ್ನು ಶಿರಾ ಗ್ರ್ಯಾನೆಟ್ ಕಲ್ಲಿನ ಮೇಲೆ ಸ್ಥಾಪಿಸಲಾಗುತ್ತಿದೆ. ಸ್ಥಳೀಯವಾಗಿ ಲಭ್ಯವಿರುವ ಕಲ್ಲುಗಳಲ್ಲಿ ಗಟ್ಟಿಯಾಗಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ.

ಹೇಗಿರಲಿದೆ ವಿನ್ಯಾಸ | ಲಂಡನ್ನಿನ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಡದಲ್ಲಿರುವ ಆಲ್ಬರ್ಟ್ ಎಂಬಾಕ್ಮೆಂಟ್ ಎಂಬ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಬಸವೇಶ್ವರ ಪುತ್ಥಳಿಯ ತದ್ರೂಪಿ ಮೂರ್ತಿಯನ್ನು ಶಿವಮೊಗ್ಗದಲ್ಲಿ ಅನಾವರಣಗೊಳಿಸಲಾಗುತ್ತಿದೆ. ಲಂಡನ್ ನಲ್ಲಿರುವಂತೆಯೇ ಪುತ್ಥಳಿ ಅಡಿಯ ಕಲ್ಲಿನ ವಿನ್ಯಾಸ ಇರಲಿದೆ. ನಾಲ್ಕೂ ಕಡೆಗಳಲ್ಲಿ ಜಗಜ್ಯೋತಿ ಬಸವೇಶ್ವರರ ವಚನಗಳನ್ನು ಕೆತ್ತನೆ ಮಾಡಲಾಗುವುದು.

ಸೂತಕೋಟೆ ಗ್ರಾಮಲ್ಲೆ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಶಿವಕುಮಾರ್ ಇತರರು ಭೇಟಿ ನೀಡಿದರು. ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಡುವಂತೆ ಸೂಚಿಸಿದರು.

https://www.suddikanaja.com/2021/07/19/ks-eshwarappa-allegation/

error: Content is protected !!