ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಗ್ರಾಮಾಂತರ ಪೊಲೀಸರು (Shimoga Rural Police) ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಮಹಿಳೆ ಸೇರಿ ಇಬ್ಬರು ಹೊರ ಜಿಲ್ಲೆಯವರನ್ನು ಬಂಧಿಸಿದ್ದಾರೆ.
ಬಿಜಾಪುರದ ಕೀರ್ತಿನಗರ ನಿವಾಸಿ ಅಬ್ದುಲ್ ಖಯ್ಯುಮ್(25) ಮತ್ತು ಬಳ್ಳಾರಿಯ ಕೊಟ್ಟೂರು ಪಟ್ಟಣದ ಅರ್ಪಿತಾ(23) ಎಂಬುವವರನ್ನು ಬಂಧಿಸಲಾಗಿದೆ.
READ | ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ವೇಶ್ಯಾವಾಟಿಕೆ ಆರೋಪ, ಇಬ್ಬರ ಬಂಧನ, ಮೂವರ ರಕ್ಷಣೆ
ಏನೇನು ಸಿಕ್ಕಿವೆ?
ಆರೋಪಿತರಿಂದ ಅಂದಾಜು 20 ಸಾವಿರ ರೂ. ಮೌಲ್ಯದ ಒಟ್ಟು 466 ಗ್ರಾಂ ತೂಕದ ಒಣ ಗಾಂಜಾ (Cannabis) ಮತ್ತು 60 ಎಂಲ್ ನ TOKER GRO, TOKER MICRO ಮತ್ತು TOKER BLOOM ಹೆಸರಿನ ತಲಾ ಒಂದು ಬಾಟಲಿಗಳು ಸಿಕ್ಕಿವೆ. TOKER CALMAG ಹೆಸರಿನ 20 ಎಂ.ಎಲ್ನ ಒಂದು ಬಾಟಲಿ, AQUALENS ಹೆಸರಿನ 120 ಎಂ.ಎಲ್ ಇರುವ ಒಂದು ಬಾಟಲಿ, ಎರಡು ಹುಕ್ಕಾ ಕೊಳವೆ ಹಾಗೂ 900 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡಕ್ಕೆ ಪ್ರಶಂಸಿಸಿದ ಎಸ್.ಪಿ
ಶುಕ್ರವಾರ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಗುರುಪುರದ ವಾಸನದ ಮನೆಯೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಆರೋಪದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗ ಬಿ ಉಪಾಧೀಕ್ಷಕ ಎಂ.ಸುರೇಶ್ ಮೇಲ್ವಿಚಾರಣೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್, ಉಪ ನಿರೀಕ್ಷಕ ಟಿ.ರಮೇಶ್ ನೇತೃತ್ವದ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಕ್ಕೆ ಎಸ್.ಪಿ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.