ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪುಷ್ಯ ಮಳೆಯ ಆರ್ಭಟ ಗುರುವಾರದಿಂದ ಮತ್ತೆ ಜೋರಾಗಿದೆ. ಬುಧವಾರ ಬಿಡುವು ನೀಡಿದ್ದ ಮಳೆ ಇಂದು ಬೆಳಗ್ಗೆಯಿಂದಲೇ ಬಿಟ್ಟೂ ಬಿಡದೆ ಸುರಿಯುತ್ತಿದೆ.
https://www.suddikanaja.com/2021/07/15/rain-in-shivamogga-5/
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಥಂಡಿ ಹಿಡಿದಿದೆ. ಅದರಲ್ಲೂ ಮಲೆನಾಡಿನ ತಾಲೂಕುಗಳಲ್ಲಿ ವರುಣ ರಚ್ಚೆ ಹಿಡಿದಿದ್ದು, ಬಿಡುವ ನೀಡುವ ಲಕ್ಷಣಗಳೇ ಕಾಣುತ್ತಿಲ್ಲ.
ತಾಲೂಕುವಾರು ಮಳೆ ವಿವರ | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದಲ್ಲಿ 6.80 ಎಂಎಂ, ಭದ್ರಾವತಿ 12.40 ಎಂಎಂ, ತೀರ್ಥಹಳ್ಳಿ 85.60 ಎಂಎಂ, ಸಾಗರ 50.40 ಎಂಎಂ, ಶಿಕಾರಿಪುರ 15.60 ಎಂಎಂ, ಸೊರಬ 20.20 ಎಂಎಂ, ಹೊಸನಗರ 147 ಎಂಎಂನಷ್ಟು ಮಳೆಯಾಗಿದೆ.
ಜಲಾಶಯದಲ್ಲಿ ನೀರಿನ ಮಟ್ಟ | ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 1819 ಅಡಿ ಇದ್ದು, ಹಾಲಿ 1796 ಅಡಿ ನೀರಿದೆ. ಒಳಹರಿವು 45,458 ಕ್ಯೂಸೆಕ್ಸ್ ಇದದೆ. ಭದ್ರಾ ಜಲಾಶಯ ಪೂರ್ಣ ಮಟ್ಟ 186 ಅಡಿಯಿದ್ದು ಪ್ರಸ್ತುತ 167.11 ಅಡಿ ನೀರಿದೆ. 15,668 ಕ್ಯೂಸೆಕ್ಸ್ ಒಳಹರಿವು ಇದ್ದು, 796 ಕ್ಯೂಸೆಕ್ಸ್ ಹೊರ ಹರಿವು ಇದೆ. ತುಂಗಾ (ಗಾಜನೂರು) ಜಲಾಶಯದಲ್ಲಿ ನೀರು ಪೂರ್ಣ ಮಟ್ಟದಲ್ಲಿದ್ದು, 31,325 ಕ್ಯೂಸೆಕ್ಸ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
https://www.suddikanaja.com/2021/07/20/heavy-rainfall-in-shivamogga-2/