ಮೈದುಂಬಿ ಹರಿಯುತ್ತಿದೆ ಜೋಗ, ರಾಜಾ, ರಾಣಿ, ರೋರರ್, ರಾಕೆಟ್‍ಗೆ ರಭಸ, ತಾಲೂಕುವಾರ ಮಳೆ ವಿವರಕ್ಕಾಗಿ ಕ್ಲಿಕ್ ಮಾಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡು ಅಕ್ಷರಶಃ ಮಳೆನಾಡಾಗಿ ಮಾರ್ಪಟ್ಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೋಗ ಜಲಪಾತ ಜೀವಕಳೆ ಬಂದಿದೆ.

https://www.suddikanaja.com/2021/01/09/administrative-approval-for-jog-development/

ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ಗಳು ಅತ್ಯಂತ ರಭಸವಾಗಿ ಪ್ರಪಾತಕ್ಕೆ ಧುಮುಕುತಿದ್ದು, ಈ ನಯನ ಮನೋಹರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿವೆ.
ಜಲಾಶಯಗಳ ವಿವರ | ಲಿಂಗನಮಕ್ಕಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 140.20 ಎಂಎಂ ಮಳೆಯಾಗಿದ್ದು, ಜಲಾಶಯದಲ್ಲಿ ನೀರಿನ ಮಟ್ಟ 1800 ಅಡಿಗೆ ತಲುಪಿದೆ. 73,431 ಕ್ಯೂಸೆಕ್ಸ್ ಒಳಹರಿವು ಇದ್ದು, 2,905.33 ಕ್ಯೂಸೆಕ್ಸ್ ಹೊರ ಹರಿವು ಇದೆ. ಭದ್ರಾ ಡ್ಯಾಂನಲ್ಲಿ 171.10 ಅಡಿ ನೀರಿದ್ದು, 39,286 ಕ್ಯೂಸೆಕ್ಸ್ ಒಳ ಹರಿವಿದ್ದು, 478 ಕ್ಯೂಸೆಕ್ಸ್ ಹೊರ ಹರಿವು ಇದೆ.
ತಾಲೂಕುವಾರು ಮಳೆ ವಿವರ | ಶಿವಮೊಗ್ಗ 57 ಎಂಎಂ, ಭದ್ರಾವತಿ 50.20 ಎಂಎಂ, ತೀರ್ಥಹಳ್ಳಿ 171.80 ಎಂಎಂ, ಸಾಗರ 228.60 ಎಂಎಂ, ಶಿಕಾರಿಪುರ 120.20 ಎಂಎಂ, ಸೊರಬ 190 ಎಂಎಂ, ಹೊಸನಗರ 210.60 ಎಂಎಂ ಸೇರಿ ಜಿಲ್ಲೆಯಲ್ಲಿ ಸರಾಸರಿ 146.91 ಮಳೆಯಾಗಿದೆ.

https://www.suddikanaja.com/2021/04/11/maintenance-problem-in-jog-falls/

error: Content is protected !!