Crime news | ಮುಳುಗುತ್ತಿದ್ದವನ ರಕ್ಷಿಸಲು ಹೋದವನೂ ಪ್ರಾಣಬಿಟ್ಟ | ಕೂಲಿಕಾರ್ಮಿಕನ ದಾರುಣ ಸಾವು

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಘಟನೆ 1
ಈಜಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿದ್ದ ರೈತ ಮೃತಪಟ್ಟ ದಾರುಣ‌ ಘಟನೆ ಚನ್ನಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ‌.
ಚನ್ನಹಳ್ಳಿ ಗ್ರಾಮದ ಅಭಯ್‌ (14) ಎಂಬಾತ ಕೃಷಿಹೊಂಡಕ್ಕೆ ಈಜಲು ಹೋಗಿದ್ದು, ಆತ ಮುಳುಗುತ್ತಿರುವುದನ್ನು ಪಕ್ಕದ ಜಮೀನಿನಲ್ಲೇ ಟ್ರಾಕ್ಟರ್’ನಲ್ಲಿ ಉಳುಮೆ ಮಾಡುತ್ತಿದ್ದ ಮಾಲತೇಶ್‌ (28) ನೋಡಿ ರಕ್ಷಿಸಲು ಮುಂದಾಗಿದ್ದಾನೆ. ಅವರೂ ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ.

Crime logo

READ | ಬ್ಯಾಂಕ್ ಬಳಕೆದಾರರೆ ಎಚ್ಚರ, ಇತ್ತೀಚೆಗೆ ಈ ಆ್ಯಪ್ ಡೌನ್ ಲೋಡ್ ಕೊಂಡಿದ್ದರೆ ಡಿಲೀಟ್ ಮಾಡಿ, ಇಲ್ಲಿದೆ ಪೂರ್ಣ ಮಾಹಿತಿ

ಘಟನೆ 2
ಕಾರು ಗುದ್ದಿ ಕೂಲಿಕಾರ್ಮಿಕ ಸಾವು

SHIMOGA: ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನ್ಯೂಮಂಡ್ಲಿ ನಿವಾಸಿ ಸೈಯದ್ ಅಲೀಮ್ (56) ಎಂಬಾತನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆಯನೂರು ಪೆಟ್ರೋಲ್ ಬಂಕ್ ಬಳಿ ಘಟನೆ ಸಂಭವಿಸಿದ್ದು, ಕೂಲಿ‌ಕೆಲಸ ಮಾಡುತ್ತಿದ್ದ ಈತ ಕೆಲಸಕ್ಕೋಸ್ಕರ ಆಯನೂರಿಗೆ ಹೋಗಿದ್ದ ಎಂದು ತಿಳಿದುಬಂದಿದೆ. ಊಟ ಮುಗಿಸಿ ಬರುವಾಗ ಕಾರು ಡಿಕ್ಕಿ ಹೊಡೆದಿದೆ.

error: Content is protected !!