ನಟಿ ಜಯಂತಿಗೆ ಶಿವಮೊಗ್ಗದ ರೊಟ್ಟಿ ಎಣಗಾಯಿ ಪಲ್ಲ್ಯೆ ಅಂದ್ರೆ ಪಂಚ ಪ್ರಾಣ, ಶಿವಮೊಗ್ಗದೊಂದಿಗೆ ಅಭಿನಯ ಶಾರದೆಯ ನಂಟು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಸೋಮವಾರ ಬೆಳಗ್ಗೆ ನಿಧನರಾದರು. ಶಿವಮೊಗ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರು ಇಲ್ಲಿಗೆ ಬಂದಾಗ ಜುವೆಲ್ ರಾಕ್ ಹೋಟೆಲ್ ನಲ್ಲಿ ತಂಗುತಿದ್ದರು.

ಅದರಲ್ಲೂ ಶಿವಮೊಗ್ಗದ ವಿಜಯಾಶ್ರೀ ಅವರ ಕುಟುಂಬದೊಂದಿಗೆ ನಿಕಟರಾಗಿದ್ದರು. ಬಂದಾಗಲೊಮ್ಮೆ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಜೊತೆಗೆ, ಎಣಗಾಯಿ ಪಲ್ಲ್ಯೆ ಮತ್ತು ರೊಟ್ಟಿ ಅಂದರೆ ಇವರಿಗೆ ಪಂಚ ಪ್ರಾಣ.

ಇವರ ಹೆಸರಿನಲ್ಲಿಯೇ ಶಿವಮೊಗ್ಗದಲ್ಲಿ ಜಯಂತಿ ಅಭಿಮಾನಿಗಳ ಸಂಘ ಎಂದೂ ಸ್ಥಾಪಿಸಲಾಗಿದೆ. ಅದರ ಉದ್ಘಾಟನಾ ಸಮಾರಂಭಕ್ಕೆ ಜಯಂತಿಯವರೇ ಬಂದಿದ್ದು ವಿಶೇಷ.
1998 ಹೊತ್ತಿನ `ನಮ್ಮೂರ ಹುಡುಗ’ ಚಲನಚಿತ್ರ ಶಿವಮೊಗ್ಗಲ್ಲಿ ಶೂಟಿಂಗ್ ಆಗಿದ್ದು ಆಗಲೂ ಜಯಂತಿ ಅವರು ಶಿವಮೊಗ್ಗಕ್ಕೆ ಬಂದಿದ್ದರು.

ಮತ್ತೂರು, ಹೊಸಹಳ್ಳಿಯಲ್ಲೂ ಕಾಲ ಕಳೆದ ಜಯಂತಿ | ಕೆ.ಎಸ್.ಸ್ವಾಮಿ ನಿರ್ದೇಶನದ ‘ಸೃಷ್ಟಿ’ ಧಾರಾವಾಹಿ ಶೂಟಿಂಗ್ ಆಗಿದ್ದು, ಶಿವಮೊಗ್ಗ ತಾಲೂಕಿನ ಮತ್ತೂರು ಮತ್ತು ಹೊಸಹಳ್ಳಿಯಲ್ಲಿ. ಆಗ ಸಾಕಷ್ಟು ದಿನ ಇಲ್ಲಿಯೇ ಇದ್ದಿದ್ದು ವಿಶೇಷ. ಎಲ್ಲರೊಂದಿಗೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ಇರುತ್ತಿದ್ದ ಅಭಿನಯ ಶಾರದೆ ಶಿವಮೊಗ್ಗದ ತೀರ್ಥಹಳ್ಳಿಗೂ ಹಲವು ಸಲ ಭೇಟಿ ನೀಡಿದ್ದಾರೆ.

https://www.suddikanaja.com/2021/06/06/the-method-of-worship-in-the-12th-century-inscription-with-its-illustration/

error: Content is protected !!