ನೂತನ‌ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ, ಅಧಿಕೃತ ಘೋಷಣೆ

 

 

ಸುದ್ದಿ‌ ಕಣಜ.ಕಾಂ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಮಧ್ಯಾಹ್ನ ಅವರು ಪ್ರಮಾಣ ವಚನ ಸ್ವೀಕರಿಲಿದ್ದಾರೆ.
ಕೊನೆಗೂ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಬೆಂಗಳೂರಿನಲ್ಲಿ‌ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದ್ದು, ಲಿಂಗಾಯತ ಸಮುದಾಯದ ಮುಖಂಡರನ್ನೇ ಮತ್ತೊಮ್ಮೆ ಸಿಎಂ ಆಗಿ ಆಯ್ಕೆ ಮಾಡಲಾಗಿದೆ.

error: Content is protected !!