ಆಗಸ್ಟ್ 2ರಿಂದ `ಶಿಕ್ಷಕ ಮಿತ್ರ’ ತಂತ್ರಾಂಶ ಬಳಕೆಗೆ ಖಡಕ್ ವಾರ್ನಿಂಗ್, ಶಿಕ್ಷಕರ ಯಾವ್ಯಾವ ಸೌಲಭ್ಯ ಇಲ್ಲಿ ಲಭ್ಯ?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿ ಸೇವಾ ಸೌಲಭ್ಯಗಳಿಗಾಗಿ ಯಾವುದೇ ಕಾರಣಕ್ಕೂ ಭೌತಿಕ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಅದಕ್ಕಾಗಿಯೇ ಸಿದ್ಧಪಡಿಸಲಾಗಿರುವ `ಶಿಕ್ಷಕ ಮಿತ್ರ’ ತಂತ್ರಾಂಶವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

https://www.suddikanaja.com/2021/04/14/decision-to-make-change-in-reservation-said-by-ks-eshwarappa/

ಆಗಸ್ಟ್ 2ರಿಂದ ಅರ್ಜಿಗಳನ್ನು ಆಪ್ ಮೂಲಕವೇ ಸ್ವೀಕರಿಸುವಂತೆ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.
ಏನೇನು ಸೌಲಭ್ಯ | ತಂತ್ರಾಂಶದಲ್ಲಿ ವರ್ಗಾವಣೆ ಅರ್ಜಿ, ರಜೆ ಅರ್ಜಿ, ಪ್ರಥಮ ವೇತನ ಪ್ರಮಾಣ ಪತ್ರ, ಪ್ರಭಾರ ಭತ್ಯೆ, ವಿಕಲಚೇತನ ಭತ್ಯೆ, ಮಿತ ಕುಟುಂಬ ಯೋಜನಾ ಭತ್ಯೆ, ಹಬ್ಬದ ಮುಂಗಡ ಪಡೆಯುವುದು, ಜಿಪಿಎಫ್, ಉನ್ನತ ವ್ಯಾಸಾಂಗ ಮತ್ತು ಇತರೆ ಹುದ್ದೆಗೆ ಅರ್ಜಿ, ಪಾಸ್ ಪೋರ್ಟ್ ನಿರಾಕ್ಷೇಪಣಾ ಪತ್ರ, ಆಸ್ತಿ ಖರೀದಿಗೆ ಅನುಮತಿ ಹೀಗೆ ನಾನಾ ಸೇವೆಗಳು ಒಂದೇ ತಂತ್ರಾಂಶದಲ್ಲಿ ಲಭ್ಯ ಇವೆ.

ರಾಜ್ಯದಾದ್ಯಂತ ಎರಡೂವರೆ ಲಕ್ಷಕ್ಕೂ ಅಧಿಕ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಕಾಲದಲ್ಲಿ ಸೇವೆ ಲಭ್ಯವಾಗಬೇಕು. ಯಾರೂ ಅನಗತ್ಯವಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಬಾರದು ಎಂಬ ಕಾರಣಕ್ಕೆ 2020ರಲ್ಲಿಯೇ ತಂತ್ರಾಂಶವನ್ನು ಸಿದ್ಧಪಡಿಸಲಾಗಿತ್ತು. ಆದರೆ, ಶಿಕ್ಷಕರು ಇದನ್ನು ಬಳಕೆ ಮಾಡಿರಲಿಲ್ಲ. ಆದರೆ, ಆಗಸ್ಟ್ 2ರಿಂದ ಕಡ್ಡಾಯವಾಗಿ ಬಳಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

https://www.suddikanaja.com/2021/03/25/plastic-awareness-by-swr/

error: Content is protected !!