ಶಿರಾಳಕೊಪ್ಪ ಮಾರ್ಗವಾಗಿ ಸಂಚರಿಸಬೇಕಾದರೆ ಎಚ್ಚರ, ರಸ್ತೆ ಬದಿ ಚಿರತೆ ಪ್ರತ್ಯಕ್ಷ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣ ಸಮೀಪದ ಕೊರಟಿಗೆರೆ ಮತ್ತು ಬಿಳಕಿ ರಸ್ತೆ ಬದಿ ಗುರುವಾರ ಸಂಜೆ ಚಿರತೆಯೊಂದ ಪ್ರತ್ಯಕ್ಷವಾಗಿದ್ದು, ನೌಷದ್ ಎಂಬುವವರು ಇದರ ವಿಡಿಯೋ ಸೆರೆ ಹಿಡಿದಿದ್ದಾರೆ.

ರಸ್ತೆ ಬದಿ ಚಿರತೆಯ ನಿರ್ಭಿಡೆ ಓಡಾಟದ ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ಬಿಳಕಿ ಗ್ರಾಮದ ನೌಷದ್ ಅವರು ಮದುವೆ ಸಮಾರಂಭಕ್ಕೆ ತೆರಳುವಾಗ ರಸ್ತೆ ಬದಿ ಚಿರತೆ ಕಾಣಿಸಿದೆ. ಕಾರಿನಲ್ಲಿದ್ದ ಹಲವರಲ್ಲಿ ಕೆಲಹೊತ್ತು ಆತಂಕ ಮೂಡಿದೆ. ಚಿರತೆ ಭಾರಿ ದಷ್ಟಪುಷ್ಟವಾಗಿದೆ.
ಎರಡು ದಿನಗಳ ಹಿಂದೆ ಕುರಿ ಹೊತ್ತೊಯ್ದ ಪ್ರಕರಣ | ಶಿರಾಳಕೊಪ್ಪದ ಕವಲಿ ಗ್ರಾಮದಲ್ಲಿ ರೈತ ನಾರಾಯಣಪ್ಪ ಎಂಬುವವರ ಕುರಿಯನ್ನು ಚಿರತೆಯೊಂದು ಹೊತ್ತೊಯ್ದಿತ್ತು. ಆದರೆ, ಇದೇ ಚಿರತೆ ಕುರಿಯನ್ನು ಹೊತ್ತೊಯ್ದಿತ್ತು ಎಂಬುವುದರ ಬಗ್ಗೆ ಮಾಹಿತಿ ಇಲ್ಲ.
ಈ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

error: Content is protected !!