ನವಜಾತ ಶಿಶು ಅದಲು ಬದಲು: ಹೆತ್ತ ಕರುಳಿನ ಅಂತ್ಯಸಂಸ್ಕಾರಕ್ಕೂ ಸಿಗದ ಅವಕಾಶ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದಿಲ್ಲೊoದು ಎಡವಟ್ಟುಗಳಿಂದ ಮೆಗ್ಗಾನ್ ಸದಾ ಸುದ್ದಿಯಲ್ಲಿರುತ್ತದೆ. ಆದರೆ, ಈ ಸಲ ನಡೆದಿರುವ ಘಟನೆ ಮಾನವೀಯ ಅಂತಃಕರಣವನ್ನೂ ಕರಗಿಸುವಂತಹದ್ದು.
ಸಿಬ್ಬoದಿಯ ಬೇಜವಾಬ್ದಾರಿದಿಂದ ಹೆತ್ತವರು ತಮ್ಮ ಅಂತ್ಯಸoಸ್ಕಾರದ ಹಕ್ಕನ್ನೂ ಕಸಿದುಕೊಂಡಿದೆ.
* ಮಕ್ಕಳ ಅದಲು ಬದಲು, ಆಗಿದ್ದೇನು:
ಸುಮಾ ಎಂಬ ಹೆಸರಿನ ಇಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ನವಜಾತ ಶಿಶುಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವುಗಳನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಅದರಲ್ಲಿ ಗಂಡು ಮಗು ಮೃತಪಟ್ಟಿದೆ. ಆದರೆ, ಸಾವನ್ನಪ್ಪಿದ ಶಿಶುವಿನ ಶವವನ್ನು ಬದುಕಿರುವ ಮಗುವಿನ ತಂದೆ ತಾಯಿಗೆ ಒಪ್ಪಿಸಲಾಗಿದೆ. ಅವರು ಅದರ ಅಂತ್ಯಸAಸ್ಕಾರವನ್ನೂ ನೆರವೇರಿಸಿದ್ದಾರೆ.
* ಯಾರ ಮಗು ಯಾರಿಗೆ:
ಸಾಗರದ ಸುಮ ಗೋಪಾಲ್ ಎಂಬುವವರಿಗೆ ಹೆಣ್ಣು ಮಗು ಹುಟ್ಟಿತ್ತು. ಭದ್ರಾವತಿ ತಾಲೂಕಿನ ಆನವೇರಿಯ ಸುಮ ಅಂಜನಪ್ಪ ದಂಪತಿಗೆ ಗಂಡು ಮಗುವಾಗಿತ್ತು. ಎರಡನ್ನೂ ಐಸಿಯುನಲ್ಲಿ ಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಗಂಡು ಮಗು ಮೃತಪಟ್ಟಿದ್ದು, ಅದನ್ನು ಸುಮ ಗೋಪಾಲ್ ಅವರಿಗೆ ನೀಡಲಾಗಿದೆ.
ಇದಾದ ಬಳಿಕ ಆಸ್ಪತ್ರೆಯವರಿಗೆ ತಮ್ಮಿಂದಾದ ಅನಾಹುತದ ಅರಿವಾಗಿ ತಕ್ಷಣ ಸುಮ ಗೋಪಾಲ್ ಅವರಿಗೆ ಫೋನ್ ಮಾಡಿ ಮಗು ಬದುಕಿರುವ ವಿಷಯ ತಿಳಿಸಲಾಗಿದೆ. ಇದರಿಂದ ಆಘಾತಕ್ಕೀಡಾದ ಸುಮ ಅಂಜನಪ್ಪ ದಂಪತಿ ಕನಿಷ್ಠ ತಮ್ಮ ಮಗುವಿನ ಶವವಾದರೂ ಕೊಡುವಂತೆ ಪಟ್ಟು ಹಿಡಿದ್ದಾರೆ. ಕರುಳ ಕುಡಿಯನ್ನು ಕಳೆದುಕೊಂಡವರು ಎಷ್ಟೇ ತಿಳಿಹೇಳಿದರೂ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇದಕ್ಕಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದಾರೆ.

ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ: ದೊಡ್ಡಪೇಟೆ ಪೊಲೀಸ್ ಠಾಣೆ ಮುಂದೆ ಕುಳಿತು ಮಗುವಿನ ಶವಕ್ಕಾಗಿ ಬೇಡಿಕೆ ಇಟ್ಟಿದ್ದರು. ಪೊಲೀಸರು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಿಗೆ ಕರೆಸಿ ವೃತ್ತಾಂತ ವಿವರಿಸಿದ್ದಾರೆ. ತಪ್ಪು ಎಸಗಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ತಿಳಿಸಿ, ಹೆತ್ತವರಿಗೆ ಮನವಿ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!