ತೆನೆ ಇಳಿಸಿ, `ಕೈ’ ಹಿಡಿದ ಮಧು ಬಂಗಾರಪ್ಪ, ಮಧು ಹೇಳಿದ ಟಾಪ್ 5 ಪಾಯಿಂಟ್ಸ್ ಏನು?

 

 

 

ಸುದ್ದಿ ಕಣಜ.ಕಾಂ
ಹುಬ್ಬಳ್ಳಿ: ಸೊರಬ ಮಾಜಿ ಶಾಸಕ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದೇನು?

  1. ಕಾಂಗ್ರೆಸ್ ಸೇರ್ಪಡೆಯೊಂದಿಗೆ ಹೊಸ ಜವಾಬ್ದಾರಿ ಲಭಿಸಿದೆ. ಅದನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತೇನೆ.
  2. ತಂದೆಯ ನೆರಳಿನಲ್ಲಿ ಬೆಳೆದಿರುವ ನನಗೆ ಬಡವರು ಮತ್ತು ದೀನರ ಕಷ್ಟಗಳ ಬಗ್ಗೆ ಗೊತ್ತಿದೆ ಎಂದರು.
  3. ರಾಜ್ಯದ ವಿವಿಧೆಡೆ ವಿವಿಧ ಪಕ್ಷಗಳಲ್ಲಿ ಬಂಗಾರಪ್ಪ ಅವರ ಅಭಿಮಾನಿಗಳಿದ್ದಾರೆ. ಅದರಲ್ಲಿ ಹಲವರು ನನ್ನ ಸ್ನೇಹಿತರಾಗಿದ್ದು, ಶಾಸಕರೂ ಆಗಿದ್ದಾರೆ. ಅವರನ್ನು ಕಾಂಗ್ರೆಸ್ಸಿಗೆ ಕರೆತರುವೆ.
  4. ವಿಧಾನಸಭೆ ಚುನಾವಣೆಯಲ್ಲಿ ಸೊರಬದಿಂದಲೇ ಸ್ಪರ್ಧಿಸುವೆ ಎಂದು ಹೇಳಿದರು.
  5. ರಾಜ್ಯದಲ್ಲಿರುವ ಸಮಸ್ಯೆಗಳನ್ನು ಸ್ಪಂದಿಸುವುದು ಕೇವಲ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

error: Content is protected !!