ಪುರಲೆಯಲ್ಲಿ ಒತ್ತುವರಿ ತೆರವುಗೊಳಿಸದಿದ್ದರೆ ಪಾಲಿಕೆ ವಿರುದ್ಧವೇ ಕೇಸ್: ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಒತ್ತುವರಿ ಆಗಿದೆ ಎನ್ನಲಾದ ಗ್ರಾಮ ಠಾಣಾ ಜಾಗವನ್ನು ಪಾಲಿಕೆ ತೆರವುಗೊಳಿಸಬೇಕು. ಸೂಕ್ತ ಕ್ರಮವಹಿಸದಿದ್ದರೆ ಮಹಾನಗರ ಪಾಲಿಕೆ ವಿರುದ್ಧವೇ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಅನ್ವಯ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬAಧ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದರು. ಕೂಡಲೇ ಪುರಲೆ ಗ್ರಾಮದ ಸರ್ವೆ ನಂಬರ್ 34, 35ರಲ್ಲಿ ಆಗಿದೆ ಎನ್ನಲಾದ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಗ್ರಾಮ ಠಾಣಾ ಜಾಗವನ್ನು ಪಾಲಿಕೆ ಸ್ವತ್ತು ಎಂದು ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದರು. ಈ ವೇಳೆ, ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೇಶ್, ಮುಖಂಡರಾದ ಮಧುಸೂದನ್, ಪುರಲೆ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!