ಶುಲ್ಕ ಪಾವತಿಸಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದ ಮಧು ಬಂಗಾರಪ್ಪ, ಮಧು ಹೇಳಿದ ಟಾಪ್ 4 ಅಂಶಗಳೇನು?

 

 

 

ಸುದ್ದಿ ಕಣಜ.ಕಾಂ | SHIVAMOGGA | POLITICS
ಶಿವಮೊಗ್ಗ: ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಯುವ ನಾಯಕ ಮಧು ಬಂಗಾರಪ್ಪ ಅವರು ಶುಲ್ಕ ಪಾವತಿಸಿ ಪ್ರಾಥಮಿಕ ಸದಸ್ಯತರವ ಪಡೆದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಶಿವಮೊಗ್ಗಕ್ಕೆ ಮೊದಲ ಸಲ‌ ಆಗಮಿಸಿದ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಬಂಗಾರಪ್ಪ ಅವರ ಕಾರ್ಯಗಳನ್ನು ಸ್ಮರಿಸಲಾಯಿತು.

https://www.suddikanaja.com/2021/08/03/welcoming-madhu-bangarappa-to-shivamogga-by-district-congress/

ಇದಕ್ಕೂ ಮುಂಚೆ ಭದ್ರಾವತಿ ಬೈಪಾಸ್ ಸರ್ಕಲ್ ನಿಂದ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಲವಗೊಪ್ಪ ಶ್ರೀ‌ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ಬೃಹತ್ ಬೈಕ್ ರ‌್ಯಾಲಿ ಮೂಲಕ ಎಂ.ಆರ್.ಎಸ್. ಸರ್ಕಲ್ ನಿಂದ ಗೋಪಿ ವೃತ್ತದವರೆಗೆ ಆಗಮಿಸಿ ಅಲ್ಲಿ ಸ್ಥಾಪಿಸಿದ ಎಸ್. ಬಂಗಾರಪ್ಪ ಬೃಹತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಧು‌ ಮಾತನಾಡಿದರು.
ಮಧು ಬಂಗಾರಪ್ಪ ಹೇಳಿದ್ದೇನು?

  1. ಬಲಿಷ್ಠ ಸಂಘಟನೆಯ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ತಂದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕಿದೆ.‌ ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಮೂಲಕವೇ ಉತ್ತರ ಕೊಡಬೇಕಿದೆ.
  2. ಬೇರು ಮಟ್ಟದಿಂದ ಪಕ್ಷವನ್ನು ಬೆಳೆಸಿ, ಅನಿವಾರ್ಯ ಆದರೆ ಜಿಲ್ಲೆಯಿಂದಲೇ ಹೋರಾಟ ಸಂಘಟಿಸಲಾಗುವುದು. ಬಡವರ ಉದ್ಧಾರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ.
  3. ತಂದೆಯವರಾದ ಎಸ್. ಬಂಗಾರಪ್ಪ ಅವರ ಹಾದಿಯಲ್ಲೇ ಸಾಗುವೆ.
  4. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರನ್ನು ಕರೆಸಿ ಎರಡು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶದ ಮೂಲಕ ಪಕ್ಷ ಸೇರಬೇಕು ಎಂದುಕೊಂಡಿದ್ದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ.

ಎರಡು ಶಕ್ತಿಗಳಿಂದ ಕೈಗೆ ಬಲ‌ ಬಂದಿದೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಮಧು ಬಂಗಾರಪ್ಪ ಹಾಗೂ ಆರ್.ಎಂ.ಮಂಜುನಾಥ್ ಗೌಡ ಅವರ ಆಗಮನದಿಂದ ಪಕ್ಷಕ್ಕೆ ಜಿಲ್ಲೆಯಲ್ಲಿ‌ ಆನೆ ಬಲ‌ ಬಂದಿದೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಆರ್. ಪ್ರಸನ್ನಕುಮಾರ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಎಸ್.ಪಿ. ದಿನೇಶ್, ಶ್ರೀನಿವಾಸ್ ಕರಿಯಣ್ಣ ಉಪಸ್ಥಿತರಿದ್ದರು.

https://www.suddikanaja.com/2021/03/18/roberrt-cinema-actress-expressed-her-gratitude-to-fans/

error: Content is protected !!