ಸುದ್ದಿ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ಆಟೋ ಮತ್ತು ಬೈಕ್ ನಡುವೆ ಬುಧವಾರ ಡಿಕ್ಕಿ ಸಂಭವಿಸಿದ್ದು, ಯಾವುದೇ ಜೀವ ಹಾನಿಯಾಗಿಲ್ಲ.
ಏಕಾಏಕಿ ಆಟೋ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಬಿ.ಬಿ.ಸ್ಟ್ರೀಟ್ ನ ಮಂಡಕ್ಕಿ ಭಟ್ಟಿ ಕಾಲೊನಿ ನಿವಾಸಿ ಗಣೇಶ್ (29) ಎಂಬುವವರು ಬೈಕ್ ನಲ್ಲಿ ಹೋಗುವಾಗ ಎದುರುಗಡೆಯಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.