ರಸ್ತೆಯ ಮೇಲೆ ಬಿದ್ದ ಮರ, ಬೈಕ್ ಸವಾರಿಗೆ ಗಾಯ

 

 

ಸುದ್ದಿ ಕಣಜ.ಕಾಂ | SORABA | CRIME
ಸೊರಬ: ಒಣಗಿದ ಮರವೊಂದು ರಸ್ತೆ ಮೇಲೆ ಬಿದ್ದು ನಿಯಂತ್ರಣ ತಪ್ಪಿದ ಬೈಕ್ ಸವಾರು ಮರಕ್ಕೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಶಾಂತಗೇರಿ ಸಮೀಪ ನಡೆದಿದೆ.
ತಾಲೂಕಿನ ಯಲವಳ್ಳಿ ಗ್ರಾಮದ ಪುನೀತ್ ಗಾಯಗೊಂಡಾತ. ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುವಾಗ ಸೊರಬ-ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಏಕಾಏಕಿ ಮರ ರಸ್ತೆಯ ಮೇಲೆ ಬಿದ್ದಿದೆ. ಬೈಕ್ ನಿಯಂತ್ರಿಸಲಾಗದೇ ಆತ ರಸ್ತೆಯ ಮೇಲೆ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ತಲೆ, ಮುಖಕ್ಕೆ ಗಾಯಗಳಾಗಿವೆ.ಸ್ಥಳೀಯರು ಗಾಯಾಳು ಪುನೀತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ರಸ್ತೆಯ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಾರೆ.

error: Content is protected !!