ಜೋಗ ಜಲಪಾತ ಸುತ್ತ ಟೈಟ್ ಸೆಕ್ಯೂರಿಟಿ, ಆರ್.ಟಿ.ಪಿ.ಸಿ.ಆರ್. ವರದಿ ಇರದೇ ಬಂದವರು ವಾಪಸ್, ಪ್ರವಾಸಿಗರು-ಪೊಲೀಸರ ನಡುವೆ ವಾಕ್ಸಮರ

 

 

ಸುದ್ದಿ ಕಣಜ.ಕಾಂ | JOGFALLS | HEALTH
ಸಾಗರ: ಜೋಗ ಫಾಲ್ಸ್ ಸುತ್ತಮುತ್ತ ಪೊಲೀಸರ ಗಸ್ತು ಇದ್ದು, ಸೀತಾಕಟ್ಟೆ ಸೇತುವೆ ಸಮೀಪ ಪೊಲೀಸರು ಪ್ರವಾಸಿಗರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ನಾನಾ ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ವರದಿ ಇಲ್ಲದೇ ಇರುವುದರಿಂದ ವಾಪಸ್ ತೆರಳುತಿದ್ದಾರೆ. ಕೆಲವರಂತೂ ದೂರದ ಪ್ರದೇಶದಿಂದ ಬಂದಿದ್ದು ಬಡಿವಂತೆ ಕ್ಯಾತೆ ತೆಗೆಯುತ್ತಿದ್ದಾರೆ.

https://www.suddikanaja.com/2021/01/09/administrative-approval-for-jog-development/

ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಪ್ರವಾಸ
ಕೋವಿಡ್ ಮೂರನೇ ಅಲೆ ಕೇರಳಾ ಮತ್ತು ಮಹಾರಾಷ್ಟ್ರದಲ್ಲಿ ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರ ಭಾಗವಾಗಿಯೇ ಪ್ರವಾಸೋದ್ಯಮ ತಾಣಗಳಿಗೆ ಬರುವವರ ಮೇಲೆ ನಿಗಾ ಇಡಲಾಗುತ್ತಿದೆ. ಜಿಲ್ಲಾಡಳಿತ ಪ್ರವಾಸಿಗರು ಕಡ್ಡಾಯವಾಗಿ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಪ್ರದರ್ಶಿಸಬೇಕು ಎಂಬ ನಿಯಮ ವಿಧಿಸಿದೆ. ಹೀಗಾಗಿ, ಖಾಸಗಿ ವಾಹನಗಳಲ್ಲಿ ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಬರುತ್ತಿರುವವರು ಹಿಂದಿರುಗುತಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶವಿದೆ ನೋಡಿಲ್ವ?

‘ಪ್ರವಾಸಿಗರಿಗೆ ಆರ್.ಟಿ.ಪಿ.ಸಿ.ಆರ್. ನಗೆಟಿವ್ ವರದಿ ತರುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ನೋಡಿಲ್ವ?ಕೊರೊನಾ ಸೋಂಕು ನಿಯಂತ್ರಿಸುವುದಕ್ಕಾಗಿ ಕ್ರಮಕೈಗೊಳ್ಳಲಾಗಿದ್ದು, ದಯವಿಟ್ಟು ವರದಿ ಇಲ್ಲದೇ ಬರಬೇಡಿ’ ಎಂದು ಪೊಲೀಸರು ಮನವಿ ಮಾಡುತಿದ್ದಾರೆ.

https://www.suddikanaja.com/2021/01/23/hatti-mining-specialist-visited-hunasodu/

error: Content is protected !!