ನ್ಯಾಮತಿ ಬಳಿ ಅಪಘಾತ, ಶಿವಮೊಗ್ಗದ ವ್ಯಕ್ತಿ ಸಾವು, ಇನ್ನೊಬ್ಬರಿಗೆ ಗಂಭೀರ ಗಾಯ, ಹೇಗೆ ನಡೀತು ಘಟನೆ?

 

 

ಸುದ್ದಿ ಕಣಜ.ಕಾಂ | KARNATAKA | CRIME
ಶಿವಮೊಗ್ಗ: ನ್ಯಾಮತಿಯ ಜಯನಗರ ಗ್ರಾಮದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಬೈಕ್ ವೊಂದು ಹಿಂಬಂದಿಯಿಂದ ಡಿಕ್ಕಿ‌ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ತಾಲೂಕಿನ ಮುದವಾಲ ಗ್ರಾಮದ ಗುರುಲಿಂಗಪ್ಪ(39) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಶಶಾಂಕ್(21) ಎಂಬಾತ ಸಹ ಶಿವಮೊಗ್ಗ ನಿವಾಸಿಯೇ ಆಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಬಾಲಕಿಯ ಮೇಲೆ ಅತ್ಯಾಚಾರ ಮಾಡಿದವ ಅರೆಸ್ಟ್

ನ್ಯಾಮತಿಗೆ ಏಕೆ ಹೋಗಿದ್ದರು?
ಶಿಕಾರಿಪುರದ ಶಾಲೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ಮುಗಿಸಿ ತಮ್ಮೂರಿಗೆ ವಾಪಸ್ ಬರುವಾಗ ಘಟನೆ ನಡೆದಿದೆ.
ಡೀಸೆಲ್ ಖಾಲಿ‌ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು.

error: Content is protected !!