ವಿ.ಐ.ಎಸ್.ಎಲ್, ಎಂಪಿಎಂ ಉಳಿವಿಗಾಗಿ ದೆಹಲಿಯಲ್ಲಿ ಪ್ರತಿಭಟನೆ, ಕೇಂದ್ರದ ಗಮನ ಸೆಳೆಯಲು

 

 

ಸುದ್ದಿ ಕಣಜ.ಕಾಂ | BHADRAVATHI | INDUSTRY
ಭದ್ರಾವತಿ: ವಿ.ಐ.ಎಸ್.ಎಲ್. ಮತ್ತು ಎಂಪಿಎಂ ಕಾರ್ಖಾನೆ ಉಳಿವಿಗಾಗಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭದ್ರಾವತಿ ಹಾಗೂ ಕಾರ್ಖಾನೆಗಳ ಉಳಿವಿಗಾಗಿ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಕೇಂದ್ರದ ಗಮನ ಸೆಳೆದರು.
ಭದ್ರಾವತಿಯ ಕಾಂಗ್ರೆಸ್ ಯುವ ಮುಖಂಡ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಭದ್ರಾವತಿ ಮೂಲದವರೇ ಆದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೋರಾಟಕ್ಕೆ ಶನಿವಾರ ಚಾಲನೆ ನೀಡಿದರು.

READ | ಜೋಗ ಜಲಪಾತ ಓಪನ್, ಆರ್.ಟಿ.ಪಿ.ಸಿ.ಆರ್. ವರದಿ ಇದ್ದರಷ್ಟೇ ಪ್ರವೇಶಕ್ಕೆ ಅವಕಾಶ, ಎಲ್ಲೆಲ್ಲಿವೆ ಚೆಕ್ ಪೋಸ್ಟ್, ಹೇಗಿದೆ ಈಗಿನ ಸ್ಥಿತಿ?

ರಾಜ್ಯ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಆರೋಪ

ಭದ್ರಾವತಿಯ ಈ ಎರಡೂ ಕಾರ್ಖಾನೆಗಳ ಪುನಶ್ಚೇತನಕ್ಕೆ ಪ್ರಯತ್ನಿಸುವುದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಾಗಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಒಂದುವೇಳೆ ಈ ಎರಡು ಕಾರ್ಖಾನೆಗಳನ್ನು ಮುಚ್ಚಿದ್ದಲ್ಲಿ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ. ಆರ್ಥಿಕ ನಷ್ಟವಾಗಲಿದೆ. ಹೀಗಾಗಿ, ಇದರೆಡೆಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಗಣೇಶ್ ಒತ್ತಾಯಿಸಿದ್ದಾರೆ.  ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

error: Content is protected !!