ಒಲಿಂಪಿಕ್ಸ್ ನಲ್ಲಿ‌ ಭಾರತಕ್ಕೆ ಚಿನ್ನ, ಶಿವಮೊಗ್ಗದಲ್ಲಿ ಪಟಾಕಿ‌ ಸಿಡಿಸಿ, ಸಿಹಿ ಹಂಚಿ ಸಂಭ್ರಮ

 

 

ಸುದ್ದಿ‌ ಕಣಜ.ಕಾಂ | SHIVAMOGGA CITY | OLYMPIC 
ಶಿವಮೊಗ್ಗ: ಒಲಿಂಪಿಕ್ಸ್ ಕ್ರೀಡಾಕೂಟದ‌ ಅಥ್ಲೆಟಿಕ್ಸ್ ನಲ್ಲಿ ನಿರಾಜ್ ಚೋಪ್ರಾ ಅವರು ಭಾರತಕ್ಕೆ ಚಿನ್ನ ಗೆದ್ದು ತಂದಿದ್ದಕ್ಕೆ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ನಿಂದ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮ ಆಚರಿಸಲಾಯಿತು.

Congress2
ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟರ್ ಅಭಿನವ್ ಬಿಂದ್ರಾ ನಂತರ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ಭಾಜನರಾಗಿದ್ದಾರೆ. ಈ‌ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
140 ಕೋಟಿ ಭಾರತೀಯರ ಹಿರಿಮೆಯನ್ನು ಎತ್ತಿ ಹಿಡಿದ ಸಾಧನೆಯನ್ನು ಅತಿ ಸಂತಸದಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಪಿ.ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮರೇಶ್, ಮುಖಂಡರಾದ ಟಿ.ವಿ. ರಂಜಿತ್, ಮಧುಸೂದನ್ ಉಪ್ಪಾರ್ ಕೇರಿ, ಪದಾಧಿಕಾರಿಗಳಾದ ಎಂ.ರಾಹುಲ್, ಪುಷ್ಪಕ್ ಕುಮಾರ್, ಅರುಣ್ ನವುಲೆ, ಕೆ ಎಲ್ .ಪವನ್, ರಾಕೇಶ್ , ವೆಂಕಟೇಶ್ ಕಲ್ಲೂರು , ವಿನಯ್ , ರಾಹುಲ್ ಸೀಗೆಹಟ್ಟಿ, ಚಿನ್ಮಯ್, ಇರ್ಫಾನ್, ಸುಹಾಸ್ ಗೌಡ ಉಪಸ್ಥಿತರಿದ್ದರು.

https://www.suddikanaja.com/2021/08/04/tokyo-olympics-review/

error: Content is protected !!