ದೇವರ ದರ್ಶನ ಪಡೆದು ವಾಪಸ್ ಬರುವಾಗ ಧಗಧಗನೇ ಹೊತ್ತಿ ಉರಿದ ಬೆಂಚ್ ಕಾರು

 

 

ಸುದ್ದಿ ಕಣಜ.ಕಾಂ | TALUK | CRIME
ಹೊಸನಗರ: ತಾಲೂಕಿನ ರಿಪ್ಪನಪೇಟೆ ಬಳಿಯ ಬೆಳ್ಳೂರು ಹತ್ತಿರ ಏಕಾಏಕಿ ಬೆಂಜ್ ಕಾರೊಂದಕ್ಕೆ ಬೆಂಕಿ ತಗುಲಿದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಅದೃಷ್ಟವಷಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗದ ಮುರುಳಿ ಎನ್ನುವವರಿಗೆ ಸೇರಿದ ಕಾರು ಹೊತ್ತಿ ಉರಿದಿದೆ. ಗುಳಿಗುಳಿ ಶಂಕರೇಶ್ವರ ದೇವಸ್ಥಾನದ ದರ್ಶನ ಪಡೆದು ಆಲಸೆ ಚಂಡಿಕಾಂಬ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮಾರ್ಗದ ನಡುವೆ ಕಾರಿನಲ್ಲಿ ಹೊಗೆ ಆವರಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದವರ ಹೊರಗೆ ಓಡಿಬಂದಿದ್ದಾರೆ. ಕ್ಷಣಾರ್ಧದಲ್ಲಿ ಕಾರು ಬೆಂಕಿಗೆ ಆಹುತಿಯಾಗಿದೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!