ಕೊರೊನಾ ಕಠಿಣ ಕಾಲದಲ್ಲಿ 561 ಅಭ್ಯರ್ಥಿಗಳಿಗೆ ಸಿಕ್ತು ಉದ್ಯೋಗ, ಬಂದ ಅಭ್ಯರ್ಥಿಗಳೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ | DISTRICT | JOB FAIR
ಶಿವಮೊಗ್ಗ: ಕಮಲಾ ನೆಹರೂ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ ಮಿಷನ್ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 561 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ.

IMG 20210826 WA0020
ಗುರುವಾರ ಆಯೋಜಿಸಿದ್ದ ಮಿನಿ ಉದ್ಯೋಗ ಮೇಳಕ್ಕೆ 2,100 ಉದ್ಯೋಗ ಆಕಾಂಕ್ಷಿಗಳು ನೋಂದಣಿ ಮಾಡಿಸಿದ್ದರು. ಶಿವಮೊಗ್ಗ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆಯ 25ಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು.

READ | ಅಡಿಕೆಗೆ ಬಂಪರ್ ಬೆಲೆ, ದರ ಏರಿಕೆಗೆ ಕಾರಣಗಳೇನು? ಮಾರುಕಟ್ಟೆ ಟ್ರೆಂಡ್ ಹೇಗಿದೆ?

ವೇಟಿಂಗ್ ಲಿಸ್ಟ್ ನಲ್ಲಿ‌ 399 ಅಭ್ಯರ್ಥಿಗಳು
ಮಿನಿ ಉದ್ಯೋಗ ಮೇಳದಲ್ಲಿ 561 ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ದೊರೆತಿರುವ ಜತೆಯಲ್ಲಿ ಇನ್ನೂ 399 ಅಭ್ಯರ್ಥಿಗಳಿಗೆ ಉದ್ಯೋಗ ಆಸಕ್ತ ಕಾಯ್ದಿರಿಸಿದ ಪಟ್ಟಿಯಲ್ಲಿ ಉದ್ಯೋಗ ಅವಕಾಶ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

error: Content is protected !!