ನಾಲ್ಕು ದಿನ ಶಿವಮೊಗ್ಗದಲ್ಲೇ ಇರಲಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ, ಏನೇನು ಕಾರ್ಯಕ್ರಮ, ಹೇಗೆ ಬರಲಿದ್ದಾರೆ?

 

 

ಸುದ್ದಿ ಕಣಜ.ಕಾಂ | KARNTAKA | POLITICS
ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಮೊದಲ ಸಲ ಬಿ.ಎಸ್.ಯಡಿಯೂರಪ್ಪ ಅವರು ತವರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

BSY Trip
ಇತ್ತೀಚೆಗೆ ಕುಟುಂಬದೊಂದಿಗೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದಿರುವ ಯಡಿಯೂರಪ್ಪ ಅವರು ಮೊದಲು ಶಿವಮೊಗ್ಗಕ್ಕೆ ಬರುತ್ತಿದ್ದಾರೆ.
ಆಗಸ್ಟ್ 27ರಂದು ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಸಂಜೆ 6 ಗಂಟೆ ಶಿವಮೊಗ್ಗಕ್ಕೆ ಬಂದು ಇಲ್ಲಿಯೇ ತಂಗಲಿದ್ದಾರೆ.

READ | ರಾಜ್ಯ ಪ್ರವಾಸಕ್ಕಾಗಿ ಹೊಸ ಐಷಾರಾಮಿ ಕಾರು ಖರೀದಿಸಿದ ಬಿ.ಎಸ್.ಯಡಿಯೂರಪ್ಪ, ಯಾವ ಕಾರು, ಪ್ರವಾಸದ ಉದ್ದೇಶವೇನು?

ಆಗಸ್ಟ್ 28ರಂದು ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ದಿನ ಕೂಡ ಶಿವಮೊಗ್ಗದಲ್ಲಿಯೇ ಇರಲಿದ್ದಾರೆ.
ಆ.29ರಂದು ಬೆಳಗ್ಗೆ 9 ಗಂಟೆಗೆ ಶಿವಮೊಗ್ಗದಿಂದ ರಸ್ತೆ ಮಾರ್ಗದ ಮೂಲಕ ಹೊರಟು 9.45ಕ್ಕೆ ಶಿಕಾರಿಪುರ ತಲುಪಲಿದ್ದಾರೆ. ಅಂದು ಶಿಕಾರಿಪುರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. 30ರಂದು ಕೂಡ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಸ್ತವ್ಯ ಹೂಡಲಿದ್ದಾರೆ ಎಂದು ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

error: Content is protected !!