ಭದ್ರಾವತಿ ಬಳಿ ಅಪಘಾತ, ಚಾಲಕ ಸಾವು, ಉಳಿದವರಿಗೆ ಗಾಯ

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ತಾಲೂಕಿನ ಬಾರಂದೂರು ಸಮೀಪ ಟಾಟಾ ಸುಮೊ ಹಾಗೂ ಓಮ್ನಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದ್ದು, ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಓಮ್ನಿ ವ್ಯಾನ್ ನಲ್ಲಿ ಮಂಜುನಾಥ್ ಹಾಗೂ ಅಫ್ಜಲ್ ಎಂಬುವವರು ಭದ್ರಾವತಿಯಿಂದ ತರೀಕೆರೆ ಕಡೆಗೆ ಹೋಗುತಿದ್ದರು. ಆಗ ಎದುರುಗಡೆಯಿಂದ ಬಂದ ಟಾಟಾ ಸುಮೋ ಓಮ್ನಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.

ಸುಮೋ ಚಾಲಕ ಸುಬ್ರಹ್ಮಣ್ಯ ಹಾಗೂ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!