ಹಾವು ಕಡಿದ‌‌ ಎರಡು ದಿನಗಳ ನಂತರ ಮೃತಪಟ್ಟ ಮಹಿಳೆ

 

 

ಸುದ್ದಿ ಕಣಜ.ಕಾಂ | TALUK | CRIME
ಸಾಗರ: ತಾಲೂಕಿನ ಗೋರೆಗದ್ದೆ ಗ್ರಾಮದಲ್ಲಿ ಕೃಷಿಕ ಮಹಿಳೆಯೊಬ್ಬರಿಗೆ ಹಾವು‌ ಕಚ್ಚಿದ್ದು, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಸಸರವಳ್ಳಿ ಸಮೀಪದ ಗೋರೆಗದ್ದೆಯ ಲಕ್ಷ್ಮಮ್ಮ (65) ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತಿದ್ದಾಗ ಗುರುವಾರ ಮಹಿಳೆಗೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದ ಕಾರಣ ಅವರು ಶನಿವಾರ ಮೃತಪಟ್ಟಿದ್ದಾರೆ. ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!