ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಮೇಲ್ದೆರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಡಿ.14ರಿಂದ 22ರ ವರೆಗೆ ಶಿವಮೊಗ್ಗ- ಮೈಸೂರು ನಡುವೆ ಸಂಚರಿಸುವ ರೈಲುಗಳು ಭಾಗಶಃ ರದ್ದಾಗಿವೆ. ಪ್ರಯಾಣಿಕರು ಸಹಕರಿಸಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಯಾವ ರೈಲುಗಳು ಭಾಗಶಃ ರದ್ದು?
ಮೈಸೂರು- ಶಿವಮೊಗ್ಗ ನಗರ (ರೈಲು ಸಂಖ್ಯೆ 16225) ರೈಲು ಡಿ.14ರಿಂದ 22ರ ವರೆಗೆ ಸಂಚಾರ ಮೈಸೂರು- ಅರಸಿಕೆರೆ ನಡುವೆ ಭಾಗಶಃ ಇರುವುದಿಲ್ಲ. ಹಾಗೂ ಶಿವಮೊಗ್ಗ ನಗರ- ಮೈಸೂರು (ರೈಲು ಸಂಖ್ಯೆ 16226) ರೈಲು ಅರಸಿಕೆರೆ- ಮೈಸೂರು ಮಧ್ಯೆ ಸಂಚಾರ ಇರುವುದಿಲ್ಲ.