ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಪೊಲೀಸರು ಓಸಿ ಹಾಗೂ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದು, ಒಟ್ಟು 43 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜಿಲ್ಲೆಯಾದ್ಯಂತ ಓಸಿ ಆಡುತ್ತಿದ್ದ ಒಟ್ಟು 38 ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ 38 ಪ್ರಕರಣಗಳು ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 31 ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 69 ಜನ ಆರೋಪಿತರ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಲಾಗಿದೆ.
12 ದಿನಗಳಲ್ಲಿ 33 ಕೇಸ್
ಕಳೆದ 12 ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಓಸಿ ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಓಸಿ ಆಡುತ್ತಿದ್ದ ಒಟ್ಟು 19 ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ 19 ಪ್ರಕರಣಗಳು ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ ಒಟ್ಟು 14 ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ 2 ಪ್ರಕರಣಗಳು ಸೇರಿ ಒಟ್ಟು 33 ಆರೋಪಿತರ ವಿರುದ್ಧ 21 ಪ್ರಕರಣಗಳನ್ನು ದಾಖಲಿಸಲಾಗಿದೆ.
Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ