ಶಿವಮೊಗ್ಗದಲ್ಲಿ ನೆಟ್ವರ್ಕ್ ಸುಧಾರಣೆ ಕುರಿತು ಜಿಲ್ಲಾಧಿಕಾರಿ ಹೇಳಿದ್ದೇನು, ವಿವಿಧ ನೆಟ್ವರ್ಕ್ ಕಂಪೆನಿಗಳೊಂದಿಗೆ ಪ್ರಮುಖ ಸಭೆ

 

 

ಸುದ್ದಿ ಕಣಜ.ಕಾಂ | DISTRICT | TELECOM
ಶಿವಮೊಗ್ಗ: ವಿವಿಧ ಮೊಬೈಲ್ ಕಂಪೆನಿಗಳಿಗೆ ತಾಲೂಕುಗಳನ್ನು ಹಂಚಿಕೆ ಮಾಡಿ, ಟವರ್‌ ನಿರ್ಮಿಸುವ ಮೂಲಕ ಉತ್ತಮ ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

https://www.suddikanaja.com/2021/07/13/no-network-no-voting-campaign-in-malenadu/

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ‌ ಜಿಲ್ಲೆಯ ಮೊಬೈಲ್ ನೆಟ್‌ ವರ್ಕ್ ಹಾಗೂ ಇಂಟರ್‌ ನೆಟ್ ಸೇವೆ ಒದಗಿಸುತ್ತಿರುವ ವಿವಿಧ ಕಂಪೆನಿಗಳ ವ್ಯವಸ್ಥಾಪಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಟ್‌ವರ್ಕ್ ಸುಧಾರಣೆಯ ಬಗ್ಗೆ ಮೊಬೈಲ್ ಕಂಪೆನಿಗಳ ವ್ಯವಸ್ಥಾಪಕರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದೆ‌. ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಲೆನಾಡು ಭಾಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನೆಟ್‌ ವರ್ಕ್‌ಗಳಲ್ಲಿ ತೊಂದರೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

https://www.suddikanaja.com/2021/07/13/no-network-no-voting-campaign-in-malenadu/

ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚನೆ
ಟವರ್‌ ನಿರ್ಮಾಣಕ್ಕಾಗಿ ಎದುರಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಇತ್ಯರ್ಥಕ್ಕೆ ಆಯಾ ವಿಭಾಗದ ಉಪ ವಿಭಾಗ‌ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಟವರ್ ಅಳವಡಿಕೆ ಕಾರ್ಯ ಕೈಗೊಳ್ಳಲಾಗುವುದು ಎಂದರು.
ನೆಟ್ ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಎಲ್ಲ ಅಂಶಗಳು ಗಮನಕ್ಕೆ ಬಂದಿದ್ದು, ಶೀಘ್ರವೇ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬಿ.ಎಸ್.ಎನ್.ಎಲ್., ಜಿಯೋ ಸೇರಿದಂತೆ ಎಲ್ಲ ಮೊಬೈಲ್ ಕಂಪೆನಿಗಳ ವ್ಯವಸ್ಥಾಪಕರು, ಕಂಪೆನಿಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

https://www.suddikanaja.com/2021/05/02/two-case-in-vinobanagara-police-station-for-illegal-supply-of-oxygen/

error: Content is protected !!