ಶಿವಮೊಗ್ಗ ಜಿಲ್ಲೆಯ ದೇವಸ್ಥಾನಗಳ ಮೇಲೆ ವ್ಯವಸ್ಥಾಪನಾ ಸಮಿತಿ ಕಂಟ್ರೋಲ್, ಏನಿದರ ಕೆಲಸ, ಇಲ್ಲಿದೆ ಕಂಪ್ಲೀಟ್ ಮಾಹಿತಿ

 

 

ಸುದ್ದಿ ಕಣಜ.ಕಾಂ | DISTRICT | RELIGIOUS
ಶಿವಮೊಗ್ಗ: ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿರುವ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳ ನಿರ್ವಹಣೆ ಹಾಗೂ ಉಸ್ತುವಾರಿಗಾಗಿ ವ್ಯವಸ್ಥಾಪನಾ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

https://www.suddikanaja.com/2020/12/12/the-12th-century-kaspaya-leaders-inscription-discovered-during-development-in-shikaripura/

ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸಂಬಂಧ ಸೆಪ್ಟಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನೋಟಿಸ್ ಬೋರ್ಡ್ ಗಳಲ್ಲಿ ಮಾಹಿತಿ
ಹೊರಡಿಸಲಾಗುವ ಪ್ರಕಟಣೆಯನ್ನು ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಕಚೇರಿ ಹಾಗೂ ಉಪ ವಿಭಾಗ ಅಧಿಕಾರಿಗಳ ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಿ, ಸಂಬಂಧಪಟ್ಟ ಗ್ರಾಮಸ್ಥರಿಗೆ ತಿಳಿಸುವಂತೆ ಸೂಚಿಸಲಾಗಿದೆ.
ಸಮಿತಿ‌ ಆರಂಭಕ್ಕೆ ಏನು‌ ಕಾರಣ?
ತಾಲೂಕು ಕೇಂದ್ರಗಳಲ್ಲಿ ಸಕಾಲಿಕವಾಗಿ ಸಭೆಗಳು ನಡೆಯುತ್ತಿಲ್ಲ. ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಆಸಕ್ತರಿಂದ ಸಲ್ಲಿಕೆಯಾಗುತ್ತಿಲ್ಲ ಎಂಬ ಬಗ್ಗೆ ಬಂದಿರುವ ದೂರಿನನ್ವಯ ಈ ಕ್ರಮ ವಹಿಸಲಾಗಿದೆ.

READ | ಶಿವಮೊಗ್ಗದಲ್ಲಿ ನೆಟ್ವರ್ಕ್ ಸುಧಾರಣೆ ಕುರಿತು ಜಿಲ್ಲಾಧಿಕಾರಿ ಹೇಳಿದ್ದೇನು, ವಿವಿಧ ನೆಟ್ವರ್ಕ್ ಕಂಪೆನಿಗಳೊಂದಿಗೆ ಪ್ರಮುಖ ಸಭೆ

ಜಿಲ್ಲೆಯ ಮುಜರಾಯಿ ದೇವಸ್ಥಾನಗಳಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳು ಅನ್ಯರ ಕೈವಶವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು‌ಬರುತ್ತಲೇ ಇವೆ. ಇದನ್ನು‌ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ವ್ಯವಸ್ಥಾಪನಾ ಸಮಿತಿ ರಚನೆಯಾದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳ‌ ಜವಾಬ್ದಾರಿ
ರಚನೆಯಾಗುವ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಜವಾಬ್ದಾರಿಯುತವಾಗಿ ದೇವಸ್ಥಾನಗಳ ಆಸ್ತಿಪಾಸ್ತಿಗಳ ದಾಖಲೆಗಳನ್ನು ನಿರ್ವಹಿಸಲು ಕ್ರಮ ವಹಿಸಬೇಕು. ಅಲ್ಲಿನ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಕುರಿತು ದಾಖಲೆಗಳನ್ನು ಹೊಂದಬೇಕು. ದೇವಸ್ಥಾನಗಳ ಭೂಮಿ ಒತ್ತುವರಿ, ದುರ್ಬಳಕೆ ಮುಂತಾದವುಗಳ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಿ, ಅವರಿಂದ ವರದಿ ಪಡೆಯಬೇಕು ಎಂದು ನೀರ್ದೇಶ ನೀಡಿದರು.

READ | ಹೊಂಬಾಳೆ ಪ್ರೊಡಕ್ಷನ್ ಹೌಸ್ ನಿಂದ ಶಿವಮೊಗ್ಗದಲ್ಲಿ ಆಡಿಷನ್, ಯಾರ‌್ಯಾರು ಭಾಗವಹಿಸಬಹುದು, ಇಲ್ಲಿದೆ ಸುವರ್ಣ ಅವಕಾಶ

ಪ್ರತಿ ತಿಂಗಳು‌ ನಡೆಯಲಿದೆ ಸಭೆ
ಸಮಿತಿಯ ಕಾರ್ಯಗಳು ನಿರಂತರವಾಗಿ ಇರಬೇಕು. ಈ‌ಕಾರಣಕ್ಕಾಗಿಯೇ ಜಿಲ್ಲಾ ಮಟ್ಟದ ಧಾರ್ಮಿಕ ದತ್ತಿ ಪರಿಷತ್‌ ಸಭೆಯನ್ನು ಪ್ರತಿ ತಿಂಗಳು ಕರೆಯಲು ತಿಳಿಸಲಾಗಿದೆ. ಈಗಾಗಲೇ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಗುರುತಿನ ಚೀಟಿ ನೀಡುವಂತೆ ಮುಜರಾಯಿ ಇಲಾಖಾ ಅಧಿಕಾರಿಗಳಿಗೆ ಸೂಚನೆ‌ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಕಿರಣ್ ಪೈ, ಜಿ.ಚಂದ್ರಶೇಖರ್, ವಿಜಯೇಂದ್ರ ಬಿ.ಸುರಕೇರಿ, ರಾಘವೇಂದ್ರಭಟ್, ಮುಜರಾಯಿ ಇಲಾಖೆಯ ವ್ಯವಸ್ಥಾಪಕ ಕಿರಣ್‌ ಸಾತಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

https://www.suddikanaja.com/2021/03/12/internal-complaints-committee-is-mandatory-even-in-private-institutions/

error: Content is protected !!