ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಗೆ ಬುಧವಾರ ಸಹ ಒಬ್ಬರು ಮೃತಪಟ್ಟಿದ್ದಾರೆ. ಇಂದು ಭದ್ರಾವತಿಯಲ್ಲಿ ಅತ್ಯಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಹೊಸದಾಗಿ 422 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 34 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 22, ಖಾಸಗಿ ಆಸ್ಪತ್ರೆಯಲ್ಲಿ 25, ಮನೆ ಆರೈಕೆಯಲ್ಲಿ 1,594 ಹಾಗೂ ಟ್ರಿಯೇಜ್ ನಲ್ಲಿ 13 ಜನರಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 1,688ಕ್ಕೆ ಏರಿಕೆಯಾಗಿದೆ.
ಭದ್ರಾವತಿಯಲ್ಲಿ 157, ಶಿವಮೊಗ್ಗದಲ್ಲಿ 125, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರದಲ್ಲಿ 19, ಸಾಗರದದಲ್ಲಿ 29, ಹೊಸನಗರದಲ್ಲಿ 47, ಸೊರಬದಲ್ಲಿ 30 ಹಾಗೂ ಬಾಹ್ಯ ಜಿಲ್ಲೆಯ 7 ಜನರಲ್ಲಿ ಸೋಂಕು ಪತ್ತೆಯಾಗಿದೆ.