ಭದ್ರಾವತಿಯಲ್ಲಿ ಮತ್ತೆ ಪುಂಡಾನೆ ದಾಳಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವರ ತೋಟದ ಕಾಂಪೌಂಡ್ ಧ್ವಂಸ

 

 

ಸುದ್ದಿ ಕಣಜ.ಕಾಂ | TALUK | WILDLIFE 
ಭದ್ರಾವತಿ: ತಾಲೂಕಿನ ಹಲವೆಡೆ ಸೋಮವಾರ ಬೆಳಗಿನ ಜಾವ ಪುಂಡಾನೆ ದಾಳಿ ಮಾಡಿದ್ದು, ತೋಟಗಳಿಗೆ ನುಗ್ಗಿ ತೆಂಗು ಇತ್ಯಾದಿಗಳನ್ನು ಧ್ವಂಸ ಮಾಡಿದೆ.
ಭದ್ರಾ ಅಭಯಾರಣ್ಯದಿಂದ ಜಂಕ್ಷನ್ ನಲ್ಲಿ ನುಗ್ಗಿದ ಒಂಟಿ ಸಲವು ಬೆಳಗಿನ ಜಾವ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರ್ವಜನಿಕರ ಜಮೀನಿನ ಸುತ್ತ ಹಾಕಿರುವ ಕಾಂಪೌಂಡ್ ಬೇಲಿಯನ್ನು ಧ್ವಂಸಗೊಳಿಸಿದೆ.
ತೆಂಗಿನ ಮರಗಳನ್ನು ಧರಾಷಾಹಿ ಮಾಡಿದ್ದು, ಒಟ್ಟು ಮೂರು ಕಡೆಗಳಲ್ಲಿ ಕಾಂಪೌಂಡ್ ಅನ್ನು ಧ್ವಂಸಗೊಳಿಸಿದೆ.
ಸ್ಥಳೀಯರು ಆನೆಯ ಉಪಟಳ ಗಮನಿಸಿ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಆನೆ ಮತ್ತೆ ಕಾಡಿನೊಳಗೆ ಓಡಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

error: Content is protected !!