ಅಡಿಕೆ ಗೊನೆಗಳನ್ನು ಕಿತ್ತು ಪರಾರಿಯಾದ ಖದೀಮರು!

 

 

ಸುದ್ದಿ ಕಣಜ.ಕಾಂ | TALUK | CRIME
ಶಿರಾಳಕೊಪ್ಪ: ಪಟ್ಟಣದ ಕೊಡಿಕೊಪ್ಪ ಗ್ರಾಮದ ಅಡಿಕೆ ತೋಟಕ್ಕೆ ನುಗ್ಗಿ 68 ಮರಗಳ ಅಡಿಕೆ ಗೊನೆಯನ್ನು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಜಯಪ್ಪ ಎಂಬುವವರಿಗೆ ಸೇರಿರುವ ಸರ್ವೆ ನಂ. 41/1ರಲ್ಲಿ 4 ಎಕರೆ 17 ಗುಂಟೆ ಜಮೀನಿನಲ್ಲಿ ಕಳ್ಳರು ಅಡಿಕೆ ಗೊನೆಗಳನ್ನು ಕಿತ್ತು ಪರಾರಿಯಾಗಿದ್ದು, ಬುಧವಾರ ಬೆಳಗ್ಗೆ ಜಯಪ್ಪ ಅವರ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಂದಾಜು 90,000 ರೂಪಾಯಿ ಮೌಲ್ಯದ ಅಡಿಕೆ ಕಳವು ಮಾಡಿರುವುದಾಗಿ ದೂರಿನಲ್ಲಿಸಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!