ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್, ಇನ್ನು ಎಷ್ಟು ದಿನ ಬರಲಿದೆ ಮಳೆ, ಹವಾಮಾನ‌ ಇಲಾಖೆ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | DISTRICT | RAIN FALL

ಶಿವಮೊಗ್ಗ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ, ಮಲೆನಾಡು ಪ್ರದೇಶದಲ್ಲಿ‌ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ‌ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 15ರ ವರೆಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ‌ ಇಲಾಖೆ ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ನಾನಾ ಕಡೆಗಳಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಬಿಸಿಲು ಮತ್ತು ಮಳೆ ಇದೆ. ಶಿವಮೊಗ್ಗದಲ್ಲಿ ಕಳೆದ‌ 24 ಗಂಟೆಗಳಲ್ಲಿ 7 ಎಂಎಂ‌ ಮಳೆಯಾಗಿದೆ.

error: Content is protected !!