ಭದ್ರಾವತಿಯಲ್ಲಿ ನಾಯಿಗಳಿಗೆ ಚುಚ್ಚು ಮದ್ದು ನೀಡಿ ಕೊಲೆ ಕೇಸ್, ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

 

 

ಸುದ್ದಿ ಕಣಜ.ಕಾಂ | TALUK | DOG’S KILLED
ಶಿವಮೊಗ್ಗ: ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಂಬದಾಳ್ ಹೊಸೂರು ಗ್ರಾಮದಲ್ಲಿ ನಡೆದಿದ್ದ ನಾಯಿಗಳ ಮಾರಣ ಹೋಮ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 12ಕ್ಕ ಏರಿಕೆಯಾಗಿದೆ.
ನಾಯಿಗಳನ್ನು ಸಾಯಿಸಿ ನಂತರ ಗುಂಡಿಯಲ್ಲಿ ಸಮಾಧಿ ಮಾಡಲಾಗಿದ್ದು, ಇದುವರೆಗೆ ಒಟ್ಟು 60 ಮೃತ ದೇಹಗಳು ಪತ್ತೆಯಾಗಿವೆ.

https://www.suddikanaja.com/2021/09/12/dogs-killed-case-9-person-arrested/

ನಾಯಿಗೆ ಚುಚ್ಚು ಮದ್ದು ನೀಡಿರುವ ಶಂಕೆ
ಪಶು ವೈದ್ಯರಿಂದ ನಾಯಿಗಳ ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ, ಪಶು ವೈದ್ಯರಿಂದ ಸಂಗ್ರಹಿಸಿದ ನಾಯಿಗಳ ಮೂಳೆ, ಚರ್ಮ, ಕೂದಲು ಮತ್ತು ಪಿತ್ತಜನಕಾಂಗದ ಭಾಗವನ್ನು ಎಫ್‌.ಎಸ್‌.ಎಲ್‌.ಗೆ ಕಳುಹಿಸಲಾಗಿದೆ.

READ | ಶಿವಮೊಗ್ಗದಿಂದ ಐದು ಮಾರ್ಗಗಳಲ್ಲಿ ವಿಮಾನ ಹಾರಾಟ, ನಾಳೆ ಅಂತಿಮ ಪ್ರಸ್ತಾವನೆ

ಗ್ರಾಮದಲ್ಲಿ ಕೆಲವು ನಾಯಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನಿಂದ ನಾಯಿ ಹಿಡಿಯುವವರನ್ನು ಕರೆಸಿದ್ದು, ಅವರು ಬೀದಿ ನಾಯಿಗಳನ್ನು ಹಿಡಿದು ಮಾರಕ ಚುಚ್ಚು ಮದ್ದನ್ನು ನೀಡಿ ಸಾಯಿಸಿದ್ದಾರೆ ಎನ್ನಲಾಗಿದೆ. ನಂತರ, ಸ್ಥಳೀಯ ಜೆಸಿಬಿ ಬಳಸಿ ಗುಂಡಿ ತೋಡಿ ಕೊಲ್ಲಲ್ಪಟ್ಟ ನಾಯಿಗಳನ್ನು ಹೂತಿರುವುದು ಮೇಲ್ನೋಟದ ತನಿಖೆಯಿಂದ ಕಂಡುಬಂದಿದೆ.

READ | ಕೊರೊನಾ ಬಗ್ಗೆ ಭವಿಷ್ಯ ನುಡಿದ ಕೋಡಿಹಳ್ಳಿಶ್ರೀ, ವಿಶ್ವದಲ್ಲಿ ಸಂಭವಿಸಲಿದೆಯಂತೆ ಇನ್ನೊಂದು ಭಯಾನಕ ಅನಾಹುತ, ಏನದು?

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಗಳನ್ನು ಹಿಡಿದು ಮಾರಕ ಚುಚ್ಚುಮದ್ದು ನೀಡಿದ ವ್ಯಕ್ತಿಗಳು, ಇಬ್ಬರು ಪಂಚಾಯಿತಿ ಸದಸ್ಯರು, ಜೆಸಿಬಿ ಆಪರೇಟರ್‌, ಪಂಚಾಯಿತಿ ಕಾರ್ಯದರ್ಶಿ ಮತ್ತು ಪಂಚಾಯಿತಿ ಬಿಲ್ ಕಲೆಕ್ಟರ್ ಸೇರಿ ಒಟ್ಟು 12 ಜನ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಸತ್ಯಾಂಶಗಳು ಹೊರ ಬರಬೇಕಿದೆ.

https://www.suddikanaja.com/2021/01/22/development-of-hunasodu-blast/

error: Content is protected !!