ಕುತ್ತಿಗೆಯ ಮೇಲೆ ಕಾಲಿಟ್ಟು ಹೆತ್ತ ತಾಯಿಯನ್ನೇ ಕೊಂದ ಮಗ!

 

 

ಸುದ್ದಿ ಕಣಜ.ಕಾಂ | CTY | CRIME
ಶಿವಮೊಗ್ಗ: ಕುತ್ತಿಗೆಯ ಮೇಲೆ ಕಾಲಿಟ್ಟು ಹೆತ್ತ ತಾಯಿಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬುಳ್ಳಾಪುರ ಗ್ರಾಮದ ಸೇವಾಲಾಲ ದೇವಸ್ಥಾನ ಸಮೀಪದ ನಿವಾಸಿ ವನಜಾಕ್ಷಿ(45) ಎಂಬುವವರೇ ಮೃತಪಟ್ಟ ಮಹಿಳೆ. ದೇವರಾಜ್ ನಾಯ್ಕ್ (27) ಎಂಬಾತ ಕೊಲೆ ಮಾಡಿದ್ದಾನೆ.
ತಂದೆಯಿಂದಲೇ ಮಗನ ಮೇಲೆ ದೂರು
ಮನೆಯಲ್ಲಿ ತನ್ನ ತಂದೆ ಮತ್ತು ತಾಯಿಯ ಜೊತೆ ಜಗಳ ತೆಗೆದ ಈತ ತಾಯಿಯ ಕಪ್ಪಾಳಕ್ಕೆ ಹೊಡೆದು, ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಆರೋಪಿಯ ತಂದೆಯು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

error: Content is protected !!