ನಾರಾಯಣ ಗುರು ವಿಚಾರ ವೇದಿಕೆ ಕಾರ್ಯಾರಂಭ, ನಿರ್ಮಾಣ ಆಗುತ್ತಿದ 30 ಅಡಿ ಎತ್ತರದ ನಾರಾಯಣ ಗುರು ಪ್ರತಿಮೆ, ಎಲ್ಲಿ ಏನು ವಿಶೇಷ?

 

 

ಸುದ್ದಿ ಕಣಜ.ಕಾಂ | TALUK | RELIGIOUS
ಸಾಗರ: ರಾಜ್ಯದಲ್ಲಿ 26 ಉಪ ಪಂಗಡಗಳನ್ನು ಜೋಡಿಸಿಕೊಂಡು ಬಲಿಷ್ಠ ಸಂಘಟನೆ ಮಾಡುವ ಉದ್ದೇಶವಿದೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಹಿರೇಇಡಗೋಡು ಹೇಳಿದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಕರೂರು ಹೋಬಳಿ ಘಟಕ ಚಾಲನೆ ನೀಡಿ ಮಾತನಾಡಿದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆಗೆ ಗ್ರಾಮ ಮಟ್ಟದಲ್ಲಿ ಯುವಕರು ಸಮುದಾಯದ ಪ್ರಜ್ಞಾವಂತರು ಕೈಜೋಡಿಸಿದ್ದಲ್ಲಿ ಸಮಾಜದ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಜಾತಿ ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜಕ್ಕೆ ಅನ್ಯಾಯವಾದಾಗ ಅದರ ಪರ ಧ್ವನಿ ಎತ್ತಬೇಕು. ಇದರಿಂದ ಮಾತ್ರ ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಸಾಧ್ಯ. ಈ ಹಿಂದೆ ಸಮಾಜದಲ್ಲಿದ್ದ ಅಸ್ಪೃಶ್ಯತೆ ಆಚರಣೆಯಿಂದಾಗಿ ಕೇರಳದಂತಹ ಪ್ರದೇಶದಲ್ಲಿ ಶಿಕ್ಷಣ ಪಡೆಯಲು ಸಹ ಕೆಳವರ್ಗದವರಿಗೆ ಅವಕಾಶ ಇರಲಿಲ್ಲ.‌ಇಂತಹ ಸಂದರ್ಭದಲ್ಲಿ ಕೇರಳದ ಬಡ ಕುಟುಂಬದಲ್ಲಿ ಜನಿಸಿದ ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ ವಿರುದ್ಧ ಜನರನ್ನು ಸಂಘಟಿಸಿದರು. ಪರಿಶಿಷ್ಟರ ಪರ ನಿಂತರು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಲ್ಲಿ ಶ್ರೀ ನಾರಾಯಣ ಗುರುಗಳ ಪಾತ್ರ ಬಹಳ ಪ್ರಮುಖವಾಗಿದೆ. ಸಮಾಜ ಸಂಘಟನಾತ್ಮಕ ದೃಷ್ಟಿಯಿಂದ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಸಮುದಾಯ ಅಭಿವೃದ್ಧಿಗಾಗಿ ಪಣ ತೊಟ್ಟಿದೆ ಎಂದರು.

ಸಾಗರ ಘಟಕದ ಗೌರವಾಧ್ಯಕ್ಷ ಶಿಶಿಲ್ ಸೋಮನ್ ಅವರು ತಾಲ್ಲೂಕಿನ ಖಂಡಿಕಾ ಗ್ರಾಮದಲ್ಲಿ ನಿರ್ಮಿಸುತ್ತಿರುವ 30 ಅಡಿ ಎತ್ತರದ ಶ್ರೀ ನಾರಾಯಣ ಗುರುಗಳ ಬೃಹತ್ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇನ್ನು ಕೆಲವು ದಿನಗಳಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ ಎಂದು‌ ಹೇಳಿದರು.
ಈ ಪ್ರತಿಮೆ‌ ರಾಜ್ಯದಲ್ಲಿಯೇ ಬಹು ವಿಶೇಷ ಆಕರ್ಷಣೆಯ ತಾಣವಾಗಲಿದೆ. ಮುಂದಿನ ದಿನಗಳಲ್ಲಿ ಇದು ನಾರಾಯಣ ಗುರುಗಳ ಸಂದೇಶವನ್ನು ಜಗತ್ತಿಗೆ ಸಾರಲು ಸಮಾಜವನ್ನು ಇನ್ನಷ್ಟು ಜಾಗೃತಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಮಾಜದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಯುವಕರನ್ನು ಪ್ರಜ್ಞಾವಂತರಾಗಿಸಲು ಪಣ ತೊಡಬೇಕು ಎಂದು ಸಲಹೆ ನೀಡಿದರು.
ಸಾಗರ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಸುರಗುಪ್ಪೆ, ತಾಲ್ಲೂಕು ಉಪಾಧ್ಯಕ್ಷ ಗಣೇಶ್ ಜಾಕಿ, ನೂತನ ಘಟಕದ ಅಧ್ಯಕ್ಷರಾಗಿ ಸುಧಾಕರ್ ಸಸಿಗೊಳ್ಳಿ ಅವರನ್ನು ಸಮಾಜದಿಂದ ಆಯ್ಕೆ ಮಾಡಲಾಯಿತು. ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಹಾರಿಗೆ, ಮಾಧ್ಯಮ ಸಲಹೆಗಾರರಾಗಿ ಸುಕುಮಾರ್ ಅವರನ್ನು ನೇಮಕ ಮಾಡಲಾಯಿತು.‌

https://www.suddikanaja.com/2021/02/13/solution-to-internet-problems-set-up-broadband-committee/

error: Content is protected !!