ಶಿವಮೊಗ್ಗದಲ್ಲಿ 300ಕ್ಕೂ ಅಧಿಕ ಪೋಕ್ಸೊ ಪ್ರಕರಣ‌ ದಾಖಲು, ಇತ್ಯರ್ಥಕ್ಕೆ ಹೆಚ್ಚುವರಿ ನ್ಯಾಯಾಧೀಶರ ನೇಮಕ

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಫೋಕ್ಸೊ ಕಾಯ್ದೆ ಅಡಿ 300ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಒಂದು ವರ್ಷದ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸಲು ಪ್ರತ್ಯೇಕವಾದ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ನ್ಯಾಯಾಧೀಶರನ್ನು ನೇಮಿಸಲು ಉಚ್ಛ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಮುಸ್ತಾಫ ಹುಸೇನ್ ಹೇಳಿದರು.

JOB ALERT | ಡಿಗ್ರಿ, ಬಿಇ ವಿದ್ಯಾರ್ಹತೆ ಇರುವವರಿಗೆ  ಇಲ್ಲಿದೆ‌ ಸುವರ್ಣ ಅವಕಾಶ, ಎಷ್ಟು ಹುದ್ದೆ, ಅರ್ಜಿ ಸಲ್ಲಿಕೆ ಹೇಗೆ?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಚೆಕ್‍ ಬೌನ್ಸ್ ಪ್ರಕರಣಗಳನ್ನು ನಿಯಂತ್ರಿಸಲು ವಿಶೇಷ ತಂಡ ರಚಿಸಲಾಗಿದೆ. ಪ್ರಕರಣ ದಾಖಲಾಗುವ ಪೂರ್ವದಲ್ಲಿಯೇ ಇತ್ಯರ್ಥಗೊಳಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

READ | ಅಡಿಕೆ ಬೆಲೆ ಏರಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲಿ‌ ಹೆಚ್ಚಿದ್ದ ಕಳ್ಳತನದ ಕಾಟ, ಹೊಳೆಹೊನ್ನೂರು ವ್ಯಾಪ್ತಿಯಲ್ಲೇ ಮೂರು‌ ಕೇಸ್ ದಾಖಲು

ಸೆಪ್ಟೆಂಬರ್ 30ರಂದು ಲೋಕ‌ ಅದಾಲತ್
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‍ ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಮುಂತಾದ ವಿಷಯಗಳ ಪ್ರಕರಣಗಳನ್ನು ಗುರುತಿಸಿ, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 30ರಂದು ಲೋಕ‌ ಅದಾಲತ್ ಆಯೋಜಿಸಲಾಗಿದೆ. ಮಧ್ಯಾಹ್ನ 1ರಿಂದ ನಡೆಯಲಿರುವ ಅದಾಲತ್‍ ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದರು.
ಕೊರೊನಾದಂತಹ ಸಾಂಕ್ರಾಮಿಕದ ಕಾರಣದಿಂದಾಗಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಅನೇಕ ಪ್ರಕರಣಗಳ ಇತ್ಯರ್ಥಕ್ಕೆ ವೇಗ ಹೆಚ್ಚಲಿದೆ. ಕಳೆದ ಸಾಲಿನಲ್ಲಿ ಇಂತಹ ಸುಮಾರು 45 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದರು.
15,013 ಪ್ರಕರಣ ಇತ್ಯರ್ಥ
ಕಳೆದ ಆಗಸ್ಟ್ 14ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಲೋಕ ಅದಾಲತ್‍ ನಿಂದಾಗಿ ಗುರುತಿಸಲಾಗಿದ್ದ 18,635 ಪ್ರಕರಣಗಳ ಪೈಕಿ 15,013 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ್ ಉಪಸ್ಥಿತರಿದ್ದರು.

https://www.suddikanaja.com/2021/07/03/sexual-harassment-on-girl/

error: Content is protected !!