ಅಡಿಕೆಗೆ ಚಿನ್ನದ ಬೆಲೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ಭಾರಿ ದರ ಏರಿಕೆ, ರಾಜ್ಯದ ಯಾವ ಮಾರುಕಟ್ಟೆಯಲ್ಲಿ‌ ಎಷ್ಟು‌ ಬೆಲೆ?

 

 

ಸುದ್ದಿ‌ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಬಂಗಾರದ ಬೆಲೆ ಇಳಿಕೆ‌‌ ಕಾಣುತಿದ್ದರೆ ಅಡಿಕೆ ಅದನ್ನೂ‌ ಮೀರಿಸುತ್ತಿದೆ. ಶುಕ್ರವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ‌ರಾಶಿ‌ ಅಡಿಕೆ ಕ್ವಿಂಟಾಲ್ ಗೆ ಗರಿಷ್ಠ ₹54,899 ದರ ನಿಗದಿಯಾಗಿತ್ತು. ಅದೇ ಹೊಸನಗರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ಗರಿಷ್ಠ ₹55,129 ನಿಗದಿಯಾಗಿತ್ತು.

READ | ಅಡಿಕೆ ಬೆಲೆ ಏರಿಕೆ ಬೆನ್ನಲ್ಲೇ ಶಿವಮೊಗ್ಗದಲ್ಲಿ‌ ಹೆಚ್ಚಿದ್ದ ಕಳ್ಳತನದ ಕಾಟ, ಹೊಳೆಹೊನ್ನೂರು ವ್ಯಾಪ್ತಿಯಲ್ಲೇ ಮೂರು‌ ಕೇಸ್ ದಾಖಲು

ಮಾರುಕಟ್ಟೆಯಲ್ಲಿ ಭಾರಿ ಸಂಚಲನವೇ ಉಂಟಾಗಿದೆ. ಅಡಿಕೆ ಬೆಲೆ ಕೆಳಗಿಳಿಯುವ ಲಕ್ಷಣವೇ ಕಾಣುತ್ತಿಲ್ಲ. ಈ ತಿಂಗಳ ಆರಂಭದಿಂದಲೇ ಅಡಿಕೆ ದರ ಗಗಮುಖಿಯಾಗಿದ್ದು, ಬೆಳೆಗಾರರ ಮೊಗದಲ್ಲಿ ಸಂತೋಷ ಮೂಡುವಂತೆ ಮಾಡಿದೆ.
17ರಂದು ರಾಶಿ ಅಡಿಕೆಗೆ ಎಲ್ಲಿ ಎಷ್ಟು ಬೆಲೆ (ಪ್ರತಿ ಕ್ವಿಂಟಾಲ್ ಗರಿಷ್ಠ ದರ)?
ಭದ್ರಾವತಿ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ ₹55,099, ಹೊನ್ನಾಳಿ ₹50,901, ಹೊಸನಗರ ₹55,129, ಸಿದ್ದಾಪುರ ₹51,599,ಶಿರಸಿ ₹52,399, ಯಲ್ಲಾಪುರ‌₹55,399, ಚನ್ನಗಿರಿ ₹54,899, ಸಾಗರ ₹54,729, ಶಿಕಾರಿಪುರ ₹55,830, ತುಮಕೂರು ₹53,200, ಚಿತ್ರದುರ್ಗ ₹53,679, ತೀರ್ಥಹಳ್ಳಿ ₹55,699 ಬೆಲೆ‌ ಇತ್ತು.

error: Content is protected !!