ಎದೆ, ಹೊಟ್ಟೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ಯುವಕನ ಬರ್ಬರ ಕೊಲೆ

 

 

ಸುದ್ದಿ‌ ಕಣಜ.ಕಾಂ | CITY | CRIME
ಶಿವಮೊಗ್ಗ: ಟಿಪ್ಪುನಗರ ಕೆ.ಕೆ.ಶೆಡ್ ಸಮೀಪದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಭವಿಸಿದೆ.

READ | ದೂರು ದಾಖಲಾದ ಒಂದೇ ದಿನದಲ್ಲಿ ಇಬ್ಬರು ಕಳ್ಳರ ಬಂಧನ

ಇರ್ಫಾನ್ ಎಂಬಾತ ಮೃತಪಟ್ಟಿದ್ದಾನೆ. ಗುಂಪೊಂದು ಈತನ ಮೇಲೆ‌ ಮಾರಕಾಸ್ತ್ರಗಳಿಂದ ದಾಳಿ ಮಾಡಿ ತಿವಿದು ಕೊಲೆ ಮಾಡಲಾಗಿದೆ.‌ ಶವವು ಚರಂಡಿಯಲ್ಲಿ ಬಿದ್ದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ. ತುಂಗಾನಗರ ಠಾಣೆ  ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತನಿಖೆ ನಡೆಯುತ್ತಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!