ಕಾರ್ಕಳದಿಂದ ಖರೀದಿಸಿ ತರಲಾಗುತ್ತಿದ್ದ ಕಾರು ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮ!

 

 

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಕಾರ್ಕಳದಲ್ಲಿ ಖರೀದಿಸಿ ಶಿವಮೊಗ್ಗಕ್ಕೆ ತರಲಾಗುತ್ತಿದ್ದ ಸೆಕೆಂಡ್ ಹ್ಯಾಂಡ್ ಕಾರು ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮವಾದ ಘಟನೆ ಭಾನುವಾರ ನಡೆದಿದೆ.
ಚಲಿಸುತ್ತಿದ್ದ ಕಾರಲ್ಲಿ ದಿಢೀರ್ ಬೆಂಕಿ
ಶಿವಮೊಗ್ಗದ ಅರವಿಂದ್ ಎನ್ನುವವರು ಕಾರನ್ನು ಖರೀದಿಸಿ ವಾಪಸ್ ಶಿವಮೊಗ್ಗಕ್ಕೆ ಬರುತ್ತಿದ್ದರು. ಆಗುಂಬೆ ಘಾಟಿಯ ಮೊದಲನೇ ತಿರುವಿನಲ್ಲಿ ಅಕಸ್ಮಾತ್ ಆಗಿ ಕಾರಿನಲ್ಲಿ ಬೆಂಕಿ ಕಾಣಿಸಿದೆ. ತಕ್ಷಣ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಕೆಳಗಿಳಿದಿದ್ದಾರೆ.

READ | ಹಾವು ಕಚ್ಚಿದಾಗ ಈ ತಪ್ಪು ಮಾಡಿದರೆ ಜೀವಕ್ಕೆ ಅಪಾಯ, ಏನು ಮಾಡಬೇಕು, ಏನು ಮಾಡಬಾರದು, ವಿಶ್ವದಲ್ಲೇ ಹೆಚ್ಚು ಜನ ಸಾಯುವುದು ಭಾರತದಲ್ಲೆ, ಕಾರಣವೇನು?

ಸುಮಾರು ಹೊತ್ತು ಟ್ರಾಫಿಕ್ ಜಾಮ್
ಆಗುಂಬೆ ಘಾಟಿಯಲ್ಲಿ ಕಾರಿನಲಕ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಅಕ್ಕಪಕ್ಕ ವಾಹನಗಳ ಓಡಾಟ ಸಾಧ್ಯವಾಗದೇ ಸುಮಾರು ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ, ಬೆಂಕಿ ನಂದಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.

error: Content is protected !!